Advertisement
ತಾಲೂಕು ಹೋರಾಟವು 175 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕು ಹೋರಾಟ ವೇದಿಕೆಯ ಪದಾಧಿಕಾರಿಗಳು ಮುಧೋಳ ಪಟ್ಟಣದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ, ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ, 175 ದಿನಗಳಿಂದ ನಡೆಯುತ್ತಿರುವ ಮಹಾಲಿಂಗಪೂರ ತಾಲೂಕು ಹೋರಾಟದ ಸಮಗ್ರ ವರದಿಯಯನ್ನು ಸರ್ಕಾರಕ್ಕೆ ಕಳಿಸಿ, ಆದಷ್ಟು ಬೇಗ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಅಗತ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಾಲೂಕು ಹೋರಾಟದ 177ನೇ ದಿನದ ಸತ್ಯಾಗ್ರಹದಲ್ಲಿ ಕೆಸರಗೊಪ್ಪ ಗ್ರಾಮಸ್ಥರಾದ ವಿಟ್ಠಲ ಢವಳೇಶ್ವರ, ದುಂಡಪ್ಪ ಜಾಧವ, ಶ್ರೀಶೈಲ ಸತ್ತಿಗೇರಿ, ಚನ್ನು ದೇಸಾಯಿ, ಜ್ಯೋತೆಪ್ಪ ಕಪರಟ್ಟಿ, ಪರಶುರಾಮ ಗಜ್ಯಾಗೋಳ, ಸುರೇಶ ಮಡಿವಾಳರ, ಸಂಗಪ್ಪ ಪೂಜೇರಿ, ಮಾರುತಿ ನಾಯಕ, ಕಲ್ಲಪ್ಪಗೌಡ ಪಾಟೀಲ, ವಿಠ್ಠಲ ಹರಿಜನ, ಸಹದೇವ ಘಟ್ನಟ್ಟಿ ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.