Advertisement

47ನೇ ದಿನ ಪೂರೈಸಿದ ಮಹಾಲಿಂಗಪುರ ತಾಲೂಕು ಹೋರಾಟ

05:55 PM May 30, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಮಹಾಲಿಂಗಪುರ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ನಿರಂತರ ಹೋರಾಟವು ಸೋಮವಾರ 47ನೇ ದಿನಗಳನ್ನು ಪೂರೈಸಿದೆ.

Advertisement

47 ನೇ ದಿನವಾದ ಸೋಮವಾರ ಪಟ್ಟಣದ ಮರಾಠ ಸಮಾಜದ ಹಿರಿಯರು, ಯುವಕ ಮಿತ್ರರು ಸೇರಿ 50ಕ್ಕೂ ಅಧಿಕ ಜನರು  ಭಾಗವಹಿಸಿ ತಾಲೂಕು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸೋಮವಾರ ಮುಂಜಾನೆ 9 ಗಂಟೆಗೆ ಪಟ್ಟಣದ ಬಸವ ವೃತ್ತದಲ್ಲಿ ಬಸವಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ, ಪ್ರತಿಯೊಬ್ಬರು ಹಿಂದುವಿ ಸ್ವರಾಜ್ಯದ ಸಂಕೇತವಾದ ಕೇಸರಿ ಶಾಲು, ತಿಲಕ ಧರಿಸಿಕೊಂಡು ಕರಡಿ ಮಜಲು ವಾದ್ಯಮೇಳದೊಂದಿಗೆ ಪಟ್ಟಣದ ಡಬಲ ರಸ್ತೆ, ವಿವೇಕ ವೃತ್ತ, ನಡಚೌಕಿ, ಜವಳಿ ಬಜಾರ, ಗಾಂಧಿವೃತ್ತದ ಮಾರ್ಗವಾಗಿ ಚನ್ನಮ್ಮ ವೃತ್ತದಲ್ಲಿನ ತಾಲೂಕು ಹೋರಾಟ ವೇದಿಕೆವರೆಗೆ ಬೃಹತ್ ಜಾಥಾ ನಡೆಸಿ, ಧರಣಿಯಲ್ಲಿ ಭಾಗವಹಿಸಿದರು.

ಛತ್ರಪತಿ ಶಿವಾಜಿ ಮಹಾರಾಜ ಮರಾಠ ಸಮಾಜ ಟ್ರಸ್ಟ್ ಕಮೀಟಿಯ ಕಾರ್ಯದರ್ಶಿ ಚಂದ್ರಶೇಖರ ಮೋರೆ ಮಾತನಾಡಿ ಮಹಾಲಿಂಗಪುರ ತಾಲೂಕು ಹೋರಾಟವು ಕಳೆದ 30 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹೋರಾಟಕ್ಕೆ ನಮ್ಮ ಮರಾಠ ಸಮಾಜದ ಬೆಂಬಲ ಸಂಪೂರ್ಣ ಇದ್ದು. ಬಾಗಲಕೋಟೆ ಜಿಲ್ಲೆಯಲ್ಲಿಯೇ ಶರವೇಗದಲ್ಲಿ ಬೆಳೆಯುತ್ತಿರುವ ಮತ್ತು ಅಧ್ಯಾತ್ಮ, ಧಾರ್ಮಿಕ, ಭಾವೈಕ್ಯತೆ, ಕೃಷಿ, ನೇಕಾರಿಕೆ, ವ್ಯಾಪಾರ, ಶೈಕ್ಷನೀಕ, ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಹೆಸರುವಾಸಿಯಾದ ಮಹಾಲಿಂಗಪುರ ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಿಸಿದರೇ, ಆಡಳಿತಾತ್ಮಕವಾಗಿ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಹೆಚ್ಚಿನ ಅನೂಕೂಲವಾಗುತ್ತದೆ. ಸರ್ಕಾರ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳು ತಾಲೂಕು ಹೋರಾಟಕ್ಕೆ ಮನ್ನಣೆ ನೀಡಿ, ಆದಷ್ಟು ಬೇಗ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

Advertisement

ತಾಲೂಕು ಹೋರಾಟ ಸಮಿತಿಯ ಸಂಗಪ್ಪ ಹಲ್ಲಿ, ಮರಾಠ ಸಮಾಜದ ಟ್ರಸ್ಟ್ ಕಮೀಟಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅಂಬಣ್ಣಗೋಳ ಮಾತನಾಡಿ ಕಳೆದ 47 ದಿನಗಳಿಂದ ಹೋರಾಟ ನಡೆಯುತ್ತಿದೆ. ತಾಲೂಕು ಕೇಂದ್ರ ಆಗುವರೆಗೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಹೋರಾಟ ಮುಂದುವರೆಯುತ್ತದೆ ಎಂದರು.

ಸೋಮವಾರದ ಧರಣಿ ಸತ್ಯಾಗ್ರಹದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಸದಸ್ಯ ರವಿ ಜವಳಗಿ, ಭಾಜಪ ನೇಕಾರ ಮುಖಂಡ ಮನೋಹರ ಶಿರೋಳ, ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಭಾಗವಹಿಸಿ ಬೆಂಬಲ ಸೂಚಿಸಿದರು.

ಮರಾಠ ಸಮಾಜದ ಅಧ್ಯಕ್ಷ ಮಹೇಶ ಜಾಧವ, ಉಪಾಧ್ಯಕ್ಷ ಅರ್ಜುನ ಮೋಪಗಾರ, ಹಿರಿಯರಾದ ಸುರೇಶ ಜಾಧವ, ರಾಮಚಂದ್ರ ಪವಾರ, ಮಹಾದೇವ ಸಾವಂತ, ವಿನಾಯಕ ಜಾಧವ, ಸುರೇಶ ಶಿಂಧೆ, ಗೋಪಾಲ ಪವಾರ, ಪರಶುರಾಮ ಜಾಧವ, ನಟರಾಜ ಸಬಕಾಳೆ, ಆನಂದ ಪವಾರ, ಮಹಾದೇವ ಮೀರಾಪಟ್ಟಿ, ಶಿವಾಜಿ ಶಿಂಧೆ, ಜ್ಯೋತಿಬಾ ಮೋಪಗಾರ, ಸಂಜು ಪವಾರ, ಹಣಮಂತ ಮೀರಾಪಟ್ಟಿ, ಶಿವಾಜಿ ಕೃಷ್ಣಾ ಜಾಧವ, ಜ್ಯೋತಿಬಾ ಪವಾರ, ನಾಗಪ್ಪ ಪವಾರ, ಸಚಿನ ಜಾಧವ, ಬಸವರಾಜ ಶಿಂಧೆ, ಮಹಾದೇವ ಪವಾರ, ಗಣೇಶ ಮೆಂಗಾಣಿ, ಸಂಜು ಪವಾರ, ಶ್ಯಾಮ ಘಾಟಗೆ, ಶರಣ ಪವಾರ, ಕೇದಾರಿ ಪವಾರ, ಕುಮಾರ ಪವಾರ, ಶಂಕರ ಪವಾರ, ಬಸವರಾಜ ಪವಾರ, ಮಾರುತಿ ಪವಾರ, ಮಹಾಲಿಂಗಪ್ಪ ಹವಾಲ್ದಾರ, ಮಲ್ಲಪ್ಪ ದಳವಾಯಿ ಹಾಗೂ

ತಾಲೂಕು ಹೋರಾಟ ಸಮಿತಿಯ ಜಯರಾಮಶೆಟ್ಟಿ, ಸಿದ್ದು ಶಿರೋಳ, ಹಣಮಂತ ಜಮಾದಾರ 47 ದಿನದ ಹೋರಾಟದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next