Advertisement

ನಾಲ್ಕು ಭಾಷೆಯಲ್ಲಿ “ಮಹಾಲಿಂಗಪುರ’ರೆಡಿ

08:37 PM Oct 15, 2019 | Team Udayavani |

ಮಹಾಲಿಂಗಪುರ… ಇದು ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸಿನಿಮಾ. ಶ್ರೀ ಅಪೋಲೋ ಪ್ರೊಡಕ್ಷನ್ಸ್‌ ಅಡಿ ಸಿದ್ಧವಾಗಿರವ ಈ ಚಿತ್ರವನ್ನು ತೋಟಾ ಕೃಷ್ಣ ನಿರ್ದೇಶಿಸಿದ್ದಾರೆ. ನಿರ್ದೇಶಕರ ವೃತ್ತಿ ಜೀವನದಲ್ಲಿ ಈ ಸಿನಿಮಾ ವಿಭಿನ್ನ ಚಿತ್ರ ಎಂಬುದು ಚಿತ್ರತಂಡದ ಮಾತು. ವಿಭಿನ್ನ ಅನುಭವ ನೀಡುವ ಕುತೂಹಲಕಾರಿ ವಿಷಯಗಳು ಚಿತ್ರದಲ್ಲಿವೆ.

Advertisement

ಚಿತ್ರಕ್ಕೆ ವಿಡುದಳ ಶಾಂಬಶಿವರಾಮ್‌ ಕಥೆ ಬರೆದಿದ್ದಾರೆ. ಶಿವಕುಮಾರ್‌ ಅವರ ಸಂಭಾಷಣೆ ಚಿತ್ರಕ್ಕಿದೆ. ಘನಶ್ಯಾಮ್‌ ಸಂಗೀತ ನೀಡಿದ್ದಾರೆ. ಮೇನಗ ಶೀನು ಸಂಕಲನವಿದೆ. ನೃತ್ಯ ನಿರ್ದೇಶಕ ಶಿವಶಂಕರ್‌ ಚಿತ್ರದಲ್ಲಿ ಶಿವ ತಾಂಡವ ನೃತ್ಯವನ್ನು ಅದ್ಭುತವಾಗಿ ಸಂಯೋಜಿಸಿದ್ದಾರೆ. ಶಿವಕುಮಾರ್‌ ಗೀತ ರಚಿಸಿದ್ದಾರೆ. ಆರ್‌.ಕೆ. ಸುರೇಶ್‌ ಮೊದಲ ಸಲ ಕನ್ನಡದಲ್ಲಿ ನಟಿಸಿದ್ದು, ಅವರಿಲ್ಲಿ ದ್ವಿಪಾತ್ರ ಮಾಡಿದ್ದಾರೆ.

ವಿದ್ಯಾಮೂರ್ತಿ ರಾವೂರಿ ವೆಂಕಟಸ್ವಾಮಿ ನಿರ್ಮಾಣದ ಈ ಚಿತ್ರದಲ್ಲಿ ಆ್ಯಕ್ಷನ್‌ ಜೊತೆಗೆ ಲವ್‌ಸ್ಟೋರಿ ಹಾಗು ಕೌಟುಂಬಿಕ ಕಥೆಯೂ ಇದೆ. ಚಿತ್ತೂರು ಕಾಣಿಪಾಕಂ ತಿರುಪತಿ ಹೈದ್ರಾಬಾದ್‌ ಮತ್ತಿತರ ತಾಣಗಳಲ್ಲಿ ಸುಮಾರು 45 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಮಧು ಬಾಲ, ಕೆವ್ವು ಕಾರ್ತಿಕ್‌, ವಿಡುದಳ ಬತ್ತಿನೇನಿ, ಶ್ರೀನಿವಾಸ್‌ ಬೊಮ್ಮರೆಡ್ಡಿ, ಮೇಘನಾ, ಮುರಳಿಕೃಷ್ಣ, ಸೋನಮ್‌, ಬೇಬಿ ಹರ್ಷಿತ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next