Advertisement
ಪುರಸಭೆಯ ಕಾರ್ಯಾಲಯದ ಒಳಾಂಗಣದ ಗೋಡೆಯ ಮೇಲೆ ಪುರಸಭೆಯ ಆಡಳಿತ ಮಂಡಳಿ ಮತ್ತು ಸ್ಥಾಯಿ ಸಮಿತಿ ಸದಸ್ಯರ ಪಟ್ಟಿಯನ್ನು ಬರೆಯಲಾಗಿದೆ. ಮಾರ್ಚ ಅಂತ್ಯದಲ್ಲಿ ಹಿಂದಿನ ಅಧ್ಯಕ್ಷರು ರಾಜೇನಾಮೆ ನೀಡಿದ ನಂತರ ಮೊದಲಿನ ಅಧ್ಯಕ್ಷರ ಹೆಸರಿನ ಮೇಲೆ ಬಿಳಿಕಾಗದ ಅಂಟಿಸಲಾಗಿತ್ತು.
ಜುಲೈ 15ರಂದು ಪುರಸಭೆಯ ಅಧ್ಯಕ್ಷರ ಆಯ್ಕೆಯಾಗಿ ನ.1ಕ್ಕೆ 105 ದಿನಗಳು ಕಳೆದರೂ ಸಹ ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಅಲ್ಲಿನ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯು ಆಡಳಿತ ಮಂಡಳಿಯ ನಾಮಫಲಕದತ್ತ ಗಮನ ಹರಿಸದೇ ಇರುವದು ವಿಪರ್ಯಾಸದ ಸಂಗತಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.
ಪಟ್ಟಣದ ಪ್ರಥಮ ಪ್ರಜೆ, ಪುರಸಭೆಯ ಅಧ್ಯಕ್ಷರ ಒಂದು ಹೆಸರನ್ನು ಬರೆಸಲು ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೂರುವರೆ ತಿಂಗಳು ಸಮಯ ಬೇಕಾದರೆ, ಇನ್ನು ಸಾರ್ವಜನಿಕ ಕೆಲಸಗಳಿಗೆ ಎಷ್ಟು ತಿಂಗಳ ಸಮಯ ಬೇಕಾಗಬಹುದು ಎಂಬುದು ಪ್ರಜ್ಞಾವಂತ ನಾಗರೀಕರ ಪ್ರಶ್ನೆಯಾಗಿದೆ. ಇದನ್ನೂ ಓದಿ : ಶಿವಮೊಗ್ಗ: ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯಕ್ಕೆ ಸಕ್ರೆಬೈಲಿನ ಸೂರ್ಯ ಆನೆ
Related Articles
ಪುರಸಭೆಯ ಮುಖ್ಯಾಧಿಕಾರಿ ಜೆ.ಎಸ್.ಈಟಿಯವರು ಪುರಸಭೆ ನೂತನ ಅಧ್ಯಕ್ಷ ಮತ್ತು ಕೆಲ ಸದಸ್ಯರ ಕೆಲಸ ಕಾರ್ಯಗಳಿಗೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರೀತವಾಗಿ ಸ್ಪಂದಿಸಲು ಆಗುತ್ತಿಲ್ಲ. ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ಪಕ್ಷದ ಮುಖಂಡರು ಮತ್ತು ಶಾಸಕರ ಗಮನಕ್ಕೆ ತರಲಾಗಿದೆ.
– ಹೆಸರುಹೇಳಲಿಚ್ಚಿಸದ ಸದಸ್ಯರು. ಪುರಸಭೆ. ಮಹಾಲಿಂಗಪುರ.
Advertisement