Advertisement

Mahalingapur: ತಾಯಿ ಮಗಳ ಸಜೀವ ದಹನ ಪ್ರಕರಣ… ಮೃತರ ಸಂಖ್ಯೆ ಮೂರಕ್ಕೆ ಏರಿಕೆ

12:34 PM Jul 18, 2024 | Team Udayavani |

ಮಹಾಲಿಂಗಪುರ: ನೆರೆಯ ರನ್ನಬೆಳಗಲಿ ಪಟ್ಟಣದಲ್ಲಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ್ದ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹೆಚ್ಚಿದ ಪ್ರಕರಣದಲ್ಲಿ ತಾಯಿ – ಮಗಳ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನೂ ಮೃತಪಟ್ಟಿದ್ದು ಇದರೊಂದಿಗೆ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

Advertisement

ಘಟನೆಯಲ್ಲಿ ತಾಯಿ ಜೈಬಾನು, ಮಗಳು ಶಬಾನಾ ಸಜೀವ ದಹನವಾಗಿದ್ದರು. ತಂದೆ ದಸ್ತಗೀರಸಾಬ ಪೆಂಡಾರಿ, ಸುಭಾನ ಪೆಂಡಾರಿ (27) ಗಾಯಾಳುಗಳಾದ್ದರಿಂದ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿತ್ತು.

ಸುಭಾನ ಪೆಂಡಾರಿಗೆ ಶೇ.75 ಕ್ಕಿಂತ ಹೆಚ್ಚಿಗೆ ಗಾಯವಾದ್ದರಿಂದ ಸುಭಾನ ಅವರನ್ನು ಮಂಗಳವಾರ ಮಧ್ಯಾಹ್ನವೇ ಬೆಳಗಾವಿಯ ಸಿವ್ಹೀಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ಗಾಯಾಳು ಸುಭಾನ ಪೆಂಡಾರಿ ಅವರು ಚಿಕಿತ್ಸೆಗೆ ಸ್ಪಂದಿಸದೇ, ಆರೋಗ್ಯ ಸ್ಥಿತಿಯು ಗಂಭೀರವಾದ್ದರಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ನಸುಕಿನ ಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈಗಾಗಲೇ ತೇರದಾಳ ಮತ್ತು ಲೋಕಾಪುರ ಎಸ್ಐ ಇಬ್ಬರು ಬೆಳಗಾವಿ ಆಸ್ಪತ್ರೆಗೆ ತೆರಳಿದ್ದಾರೆ. ಸುಭಾನ ಮೃತದೇಹವನ್ನು ನೇರವಾಗಿ ಮುಧೋಳ ತಾಲೂಕು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡಿಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಸ್ತಗೀರಸಾಬ ಪೆಂಡಾರಿ ಅವರ ಆರೋಗ್ಯದಲ್ಲಿ ಚೇತರಿಕೆ ಇದ್ದು ಗುಣಮುಖರಾಗುತ್ತಾರೆ ಎಂಬ ಮಾಹಿತಿ ಇದೆ.

Advertisement

ಸಂಜೆ ವೇಳೆಗೆ ಅಪರಾಧಿಗಳ ಪತ್ತೆ? : ಕಳೆದ ಮೂರು ದಿನಗಳಿಂದ 8 ತಂಡಗಳ ಮೂಲಕ ಆರೋಪಿಗಳ ಪತ್ತೆಗಾಗಿ ತೀವೃ ಕಾರ್ಯಾಚರಣೆ ನಡೆಯುತ್ತಿದೆ. ಬಹುಶಃ ಗುರುವಾರ ಸಂಜೆ ವೇಳೆಗೆ ಅಪರಾಧಿಗಳ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೋಲಿಸ್ ಇಲಾಖೆಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಧೋಳಕ್ಕೆ ಎಸ್ ಪಿ ಆಗಮನ : ಮಹಾಲಿಂಗಪುರ ಠಾಣೆಗೆ ತಂದಿದ್ದ ಶಂಕಿತರನ್ನು ವಿಚಾರಣೆಗಾಗಿ ಮುಧೋಳ ಠಾಣೆಗೆ ಕರೆದೊಯ್ಯಲಾಗಿದೆ. ವಿಚಾರಣೆಗಾಗಿ ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ಅವರು ಮುಧೋಳ ಠಾಣೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ: Facebook, ಇನ್‌ಸ್ಟಾಗೂ ದೃಢೀಕರಣ ಸೌಲಭ್ಯ: ತಿಂಗಳಿಗೆ 639 ರೂ. ಶುಲ್ಕ

Advertisement

Udayavani is now on Telegram. Click here to join our channel and stay updated with the latest news.

Next