Advertisement
ಬುಧವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ಪ್ರಹ್ಲಾದ ಸಣ್ಣಕ್ಕಿ ಮಾತನಾಡಿ, ಪಟ್ಟಣದ ಚನ್ನಮ್ಮ ವೃತ್ತದಿಂದ ರಬಕವಿ ರಸ್ತೆಯ ಮಹಾದ್ವಾರದವರೆಗೆ ಮತ್ತು ಬಸವ ವೃತ್ತದಿಂದ ಎಪಿಎಂಸಿ ಮಹಾದ್ವಾರದವರೆಗೆ ಡಬಲ್ ರಸ್ತೆ, ಡಿವೈಡರ್, ಪಾದಚಾರಿ ರಸ್ತೆ ನಿರ್ಮಿಸಬೇಕು ಎಂದರು.
Related Articles
Advertisement
ಪುರಸಭೆ ಮಾಜಿ ಸದಸ್ಯ ಶಿವಲಿಂಗ ಘಂಟಿ ಮಾತನಾಡಿ, ಕರ ಪಾವತಿಸಲು ಬಂದ ಸಾರ್ವಜನಿಕರಿಗೆ ಸರಿಯಾಗಿ ಚಲನ್ ಮಾಡಿಕೊಡುವುದಿಲ್ಲ, ಹೀಗಾದರೆ ಕರ ವಸೂಲಿ ಮತ್ತು ಸ್ಥಳೀಯ ಸಂಪನ್ಮೂಲ ಕ್ರೋಢಿಕರಣ ಹೇಗೆ ಸಾಧ್ಯ ಎಂದರು. ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಮಾತನಾಡಿ ಮುಂದಿನ ಎರಡು ವರ್ಷಗಳ ಕಾಲ ಪುರಸಭೆಯ ಯಾವುದೇ ಕರಗಳನ್ನು ಹೆಚ್ಚಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದರು. ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳ್ಳಿ, ಚನಬಸು ಹುರಕಡ್ಲಿ, ಮಹಾಲಿಂಗಪ್ಪ ಕೋಳಿಗುಡ್ಡ, ಶಿವಾನಂದ ಅಂಗಡಿ, ಬಿ.ಎಂ.ಯಾದವಾಡ, ಭೀಮಸಿ ಗೌಂಡಿ, ವಿರೂಪಾಕ್ಷ ಬಾಟ, ಮಹಾಲಿಂಗಪ್ಪ ಮುದ್ದಾಪುರ ಮಾತನಾಡಿದರು. ಮುಖ್ಯಾ ಧಿಕಾರಿ ಬಾಬುರಾವ್ ಕಮತಗಿ, ಶ್ರೀಮಂತ ಹಳ್ಳಿ, ಈರಪ್ಪ ದಿನ್ನಿಮನಿ, ಸವಿತಾ ಕೋಳಿಗುಡ್ಡ, ರಾಜು ಗೌಡಪ್ಪಗೋಳ, ಸುನೀಲಗೌಡ ಪಾಟೀಲ, ವಿ.ಜಿ. ಕುಲಕರ್ಣಿ, ಎಸ್.ಎನ್. ಪಾಟೀಲ, ಬಿ.ವೈ. ಮರದಿ ಇದ್ದರು.