Advertisement

17ರಂದು ಮಹಾಲಿಂಗಪುರ ಬಂದ್‌

02:29 PM Aug 11, 2022 | Team Udayavani |

ಮಹಾಲಿಂಗಪುರ: ಆಗಸ್ಟ್‌ 16ರೊಳಗೆ ರಾಜ್ಯ ಸರ್ಕಾರವು ಮಹಾಲಿಂಗಪೂರ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಿಸಬೇಕು. ಇಲ್ಲದಿದ್ದರೆ 17ರಂದು ಮಹಾಲಿಂಗಪುರ ಪಟ್ಟಣವನ್ನು ಸಂಪೂರ್ಣ ಬಂದ್‌ ಮಾಡಿ, ಹೋರಾಟದ ಸ್ವರೂಪವನ್ನು ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.

Advertisement

ಬುಧವಾರ ಪಟ್ಟಣದ ಕೌಜಲಗಿ ನಿಂಗಮ್ಮ ರಂಗಮಂದಿರದಲ್ಲಿ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಯಿಂದ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಾಲಿಂಗಪುರ ತಾಲೂಕು ಆಗುವರೆಗೂ ಹೋರಾಟ ಮುಂದುವರಿಯಲಿ. ಆ. 17ರ ಮಹಾಲಿಂಗಪುರ ಬಂದ್‌ ನಂತರ ತಾಲೂಕು ಹೋರಾಟದ ಸ್ವರೂಪವನ್ನು ಉಗ್ರರೂಪಕ್ಕೆ ಬದಲಿಸಲು ಸಹಮತ ವ್ಯಕ್ತಪಡಿಸಿದರು.

ಮಹಾಲಿಂಗಪುರ ಹೋರಾಟ ಸಮಿತಿಯ ಮಹಾಲಿಂಗಪ್ಪ ಕೋಳಿಗುಡ್ಡ, ಪುರಸಭೆಯ ಮಾಜಿ ಅಧ್ಯಕ್ಷ ಜಿ.ಎಸ್‌.ಗೊಂಬಿ ಮಾತನಾಡಿ, ಸರ್ಕಾರವು ಶೀಘ್ರ ಹೊಬಳಿ ಕೇಂದ್ರವನ್ನಾಗಿ ಘೋಷಿಸುತ್ತದೆ. ಅದನ್ನು ಒಪ್ಪಿಕೊಂಡು ಹೋರಾಟ ಮೊಟಕುಗೊಳಿಸೋಣ ಎನ್ನುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಿದ ಮುಖಂಡರು, ತಾಲೂಕು ಹೋರಾಟ ಸಮೀತಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ವೇದಿಕೆ ತೆರವುಗೊಳಿಸುವುದಿಲ್ಲ. ತಾಲೂಕು ಹೋರಾಟ ಆಗುವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರೆಪ್ಪ ಸಾಂಗ್ಲೀಕರ, ಮಹಾಂತೇಶ ಹಿಟ್ಟಿನಮಠ, ರಂಗನಗೌಡ ಪಾಟೀಲ, ಸಿದ್ದು ಪಾಟೀಲ, ವಿರೇಶ ಆಸಂಗಿ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ, ನಿಂಗಪ್ಪ ಬಾಳಿಕಾಯಿ, ಜಾವೇದ ಬಾಗವಾನ, ಚನ್ನಬಸು ಹುರಕಡ್ಲಿ, ನ್ಯಾಯವಾದಿ ಎಂ.ಎಸ್‌.ಮನ್ನಯ್ಯನವರಮಠ, ಸುರೇಶ ಮಡಿವಾಳರ, ಮಲ್ಲಪ್ಪ ಸಿಂಗಾಡಿ, ಶಂಕರ ಹುಕ್ಕೇರಿ, ಸಂಗಪ್ಪ ಹಲ್ಲಿ, ಮಹಾದೇವ ಮೇಟಿ, ಶಿವಾನಂದ ತಿಪ್ಪಾ, ಮನೋಹರ ಶಿರೋಳ ಮಾತನಾಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಸದಸ್ಯ ಯಲ್ಲನಗೌಡ ಪಾಟೀಲ, ಮುಖಂಡರಾದ ಆರ್‌.ಟಿ.ಪಾಟೀಲ, ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಜಮೀರ ಯಕ್ಸಂಬಿ, ಶೇಖರ ಅಂಗಡಿ, ಚನ್ನು ದೇಸಾಯಿ, ಪ್ರಕಾಶ ಚನ್ನಾಳ, ಶಿವನಗೌಡ ಪಾಟೀಲ, ಈಶ್ವರ ಚಮಕೇರಿ, ಮುಸ್ತಕ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಸಿದ್ದು ಶಿರೋಳ, ಪಂಡಿತ ಪೂಜೇರಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ಅಸ್ಲಂ ಕೌಜಲಗಿ ಭಾಗವಹಿಸಿದ್ದರು.

Advertisement

ತಾಲೂಕು ಹೋರಾಟದ ಈವರೆಗಿನ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ನೂತನ ತಾಲೂಕು ಹೋರಾಟ ಸಮಿತಿ ರಚಿಸುವುದು, ಪಕ್ಷಾತೀತವಾಗಿ ತಾಲೂಕು ಆಗುವರೆಗೂ ನಿಸ್ವಾರ್ಥವಾಗಿ ಹೋರಾಟ ಮಾಡುವಂತರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು, ಮಹಾಲಿಂಗಪುರ ಮತ್ತು ಸಂಬಂಧಿಸಿದ ಎಲ್ಲ ಗ್ರಾಮಗಳ ಹಿರಿಯರನ್ನು ಒಳಗೊಂಡಂತೆ ವಿವಿಧ ಉಪ ಸಮಿತಿಗಳ ರಚನೆ, ಹೋರಾಟದಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯದೇ ಒಗ್ಗಟ್ಟಿನ ಪ್ರದರ್ಶನ ಮಾಡುವುದು, ಹೋರಾಟ ಉದ್ದೇಶ ಯಾರ ಮತ್ತು ಯಾವ ಪಕ್ಷದ ವಿರುದ್ಧವಲ್ಲ, ಅದು ಕೇವಲ ಮಹಾಲಿಂಗಪುರ ತಾಲೂಕು ರಚನೆಗಾಗಿ ಎಂಬ ಸಿದ್ದಾಂತಕ್ಕೆ ಸರ್ವರು ಬದ್ಧರಾಗಿ ಹೋರಾಟ ಮುಂದುವರಿಸಿದಾಗ ಮಾತ್ರ ತಾಲೂಕು ಹೋರಾಟ ಯಶಸ್ವಿಯಾಗಲು ಸಾಧ್ಯ ಎಂಬ ಅಭಿಪ್ರಾಯಗಳು ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಪ್ರಮುಖಂಡರಿಂದ ಕೇಳಿಬಂದವು.

Advertisement

Udayavani is now on Telegram. Click here to join our channel and stay updated with the latest news.

Next