ಮಹಾಲಿಂಗಪುರ: ಭಾರಿ ಕುತೂಹಲ ಕೆರಳಿಸಿದ್ದ ಮಹಾಲಿಂಗಪುರ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ಇಂದು (ಆಗಸ್ಟ್ 23) ಮುಂಜಾನೆ 10 ರಿಂದ 11 ರವರಗೆ ಇದ್ದ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಯಲ್ಲನಗೌಡ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ರಾಜೇಶ ಭಾವಿಕಟ್ಟಿ ಅವರು ಚುನಾವಣಾಧಿಕಾರಿ ಗಿರೀಶ ಸ್ವಾದಿ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ರಜಾಕ್ ಬಾಗವಾನ, ಉಪಾಧ್ಯಕ್ಷ ಸ್ಥಾನಕ್ಕೆ ಬಲವಂತಗೌಡ ಪಾಟೀಲ್ ಸೂಚಕರಾಗಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭವಾಗಲಿದೆ. ಸಭೆಯ ಪ್ರಾರಂಭದ ನಂತರ ಚುನಾವಣಾ ಪ್ರಕ್ರೀಯೆಗಳು ಮುಗಿದು, ಅವಿರೋಧ ಆಯ್ಕೆಯ ಘೋಷನೆಯಾಗಲಿದೆ.
ಕಣದಿಂದ ಹಿಂದೆ ಸರಿದ ಬಿಜೆಪಿ : ಕಳೆದ ಬಾರಿ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯ ಸಜನಸಾಬ ಪೆಂಡಾರಿ ಈ ಬಾರಿ ಬಿಜೆಪಿಗೆ ಬೆಂಬಲಿಸಿದ್ದರಿಂದ ಹಾಗೂ ಬಿಜೆಪಿ ಬಂಡಾಯ ಸದಸ್ಯರು ಮತ್ತೆ ಕಾಂಗ್ರೆಸ್ ಕೈ ಹಿಡಿದ ಕಾರಣದಿಂದಾಗಿ ಬಿಜೆಪಿ ಪಕ್ಷವು ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯ ಕಣದಿಂದ ಹೊರಗುಳಿದಿದೆ. ಚುನಾಯಿತ 13 ಸದಸ್ಯರು (ಬಂಡಾಯ 3 ಸದಸ್ಯರು ), ಶಾಸಕರು, ಸಂಸದರು ಸೇರಿ 15 ಮತಗಳಿದ್ದರು ಸಹ, 3 ಬಂಡಾಯ ಸದಸ್ಯರು ಮತ್ತು ಪಕ್ಷೇತರ ಅಭ್ಯರ್ಥಿಯು ಕಾಂಗ್ರೆಸ್ ಗೆ ಬೆಂಬಲಿಸಿದ್ದರಿಂದ ಪ್ರಸಕ್ತ ಅವಧಿಯಲ್ಲಿ ಎರಡುವರೆ ವರ್ಷಗಳ ಇಬ್ಬರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಸಹ, ಪಕ್ಷದ ಸದಸ್ಯರಲ್ಲಿನ ಹೊಂದಾಣಿಕೆಯ ಕೊರತೆಯಿಂದ ಬಹುಮತವಿದ್ದರೂ ಕೈಯಲ್ಲಿನ ಅಧಿಕಾರ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಕುರಿತು ಬಿಜೆಪಿ ಸದಸ್ಯರು, ಮುಖಂಡರು, ಶಾಸಕರು, ಸಂಸದರು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ ಎಂಬುದು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ಅಳಲಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವರನ್ನು ಭೇಟಿಯಾದ ಗೋವಾ ಸಿಎಂ… ವಿಮಾನ ನಿಲ್ದಾಣದ ಮೂಲಸೌಕರ್ಯ ಹೆಚ್ಚಿಸಲು ಮನವಿ