ಮಂಡ್ಯ: ಯಾವುದೇ ಒಂದು ದೇಶ ಅಭಿವೃದ್ಧಿಯತ್ತ ಮುನ್ನಡೆಯಲು ವಿಸ್ತೃತವಾದ ಮಾಸ್ಟರ್ ಪ್ಲಾನ್ ಅಗತ್ಯ. ಅದು ತಯಾರಾಗಲು ಪ್ರಾಥಮಿಕ ದತ್ತಾಂಶ ಅವಶ್ಯ. ಇದರ ಮಹತ್ವವನ್ನು ಸಾರಿದ ಮಹಾನ್ ವ್ಯಕ್ತಿ ಪ್ರಶಾಂಸ ಚಂದ್ರ ಮಹಾಲನೋಬಿ ಸ್ ಎಂದು ಡೀಸಿ ಡಾ.ವೆಂಕಟೇಶ್ ಹೇಳಿದರು. ಸೋಮವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಶಾಂಸ ಚಂದ್ರ ಮಹಾಲನೋಬಿಸ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಒಂದು ದೇಶ ವ್ಯವಸ್ಥಿತವಾಗಿ ಸಮಗ್ರವಾಗಿ ಎಲ್ಲರನ್ನು ಒಳಗೊಂಡು ಅಭಿವೃದ್ಧಿಯಾಗಬೇಕಾದರೆ ಸಂಖ್ಯೆಗಳ ಮಾಹಿತಿ ಪ್ರಮುಖ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಈ ಸಂಖ್ಯೆಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ ಒಂದು ಮಾಹಿತಿ ಸಮಗ್ರವಾಗಿರಬೇಕು, ಪ್ರಾಯೋಗಿಕವಾಗಿರಬೇಕು ಯಾವುದೇ ಲೋಪದೋಷಗಳು ಇರಬಾರದು ಎಂದರು.
ಪ್ರಶಾಂಸ ಚಂದ್ರ ಮಹಾಲನೋಬಿಸ್ ಅವರು ಹಾಕಿಕೊಟ್ಟಂತಹ ತಳಪಾಯದಿಂದ ಭಾರತ ದೇಶ ಪಂಚವಾರ್ಷಿಕ ಯೋಜನೆಗಳು ನಿರ್ಮಾಣವಾಗಿವೆ. ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಆದಾಯ, ಖರ್ಚು, ವೆಚ್ಚವನ್ನು ತಿಳಿದುಕೊಂಡು ನಾವು ಯಾವ ರೀತಿ ಖರ್ಚು ಮಾಡಿದರೆ ದೇಶದ ಸರ್ವೋತ್ತಮ ಆಗುತ್ತದೆ ಎಂಬುದನ್ನು ತಿಳಿಸಿಕೊಟ್ಟಿದೆ ಎಂದು ಹೇಳಿದರು.
ಅಭಿವೃದ್ಧಿಗೆ ಶ್ರಮಿಸಿ: ಭಾರತವು ಅಭಿವೃದ್ಧಿ ರಾಷ್ಟ್ರವಾಗಿರುವುದರಿಂದ ಸುಸ್ಥಿರ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮಪಡಬೇಕು. ಸರ್ಕಾರ ಜಾರಿಗೊಳಿಸುವ ಯೋಜನೆಗಳು ಅನುಷ್ಠಾನಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡಿದಾಗ ಮಾತ್ರ ಮಾಡಿದ ಕೆಲಸಕ್ಕೆ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಹೇಳಿದರು.
ಸಂಖ್ಯೆಗಳ ಬಗ್ಗೆ ಮತ್ತು ದತ್ತಾಂಶಗಳ ಕ್ರೊಢೀಕರಣಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ವೇದಿಕೆಯಾಗಿ ಉಪಯೋಗಿಸಿಕೊಳ್ಳಲಾಗಿದೆ. ಇದರ ಜೊತೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿಯ ದತ್ತಾಂಶ ಮತ್ತು ಕಾಲಾನುಕ್ರಮಕ್ಕೆ ಮಾಡುವಂತಹ ಕೃಷಿ ಚಟುವಟಿಕೆಗಳು, ಬೆಳೆಗಳ ಸಂಶೋಧನೆ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಸರ್ವೆ, ಲಿಂಗಾನು ಪಾತದ ಸರ್ವೆಗಳು ಹೇಗೆ ನಮ್ಮ ಮುಂದಿನ ಅಭಿವೃದ್ಧಿಗೆ ಸಮರ್ಪಕವಾಗಿ ಮಾಡಲು ಬಹಳ ಪ್ರಮುಖವಾಗಿದೆ. ಇದಕ್ಕೆ ವೈಜ್ಞಾನಿಕ ಮನೋಧೋರಣೆ ಕೂಡ ಮುಖ್ಯ ಎಂದರು.
ಕೈಗಾರಿಕೆಗಳಿಗೆ ಆದ್ಯತೆ: ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಯಾಲಕ್ಕಿ ಗೌಡ ಮಾತನಾಡಿ, ಒಬ್ಬ ಸಂಖ್ಯಾಶಾಸOಉಜ್ಞ ಒಂದು ದೇಶಕ್ಕೆ ಏನೆಲ್ಲಾ ಕೊಡುಗೆ ನೀಡಬ ಹುದು ಎಂಬುದಕ್ಕೆ ಮಹಾಲನೋಬಿ ಸ್ ಉದಾಹರಣೆ. ಯೋಜನಾ ಆಯೋಗದ ಪ್ರಥಮ ಸದಸ್ಯ ರಾಗಿದ್ದು, 2ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕೆ ಗಳಿಗೆ ಆದ್ಯತೆ ನೀಡಿದವರು ಎಂದರು. ಕೊರೊನಾ ವಾರಿಯಸ್‌ಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಡಿಎಚ್‌ಒ ಡಾ. ಮಂಚೇಗೌಡ, ಯೋಜನಾಧಿಕಾರಿ ಧನುಷ್ ಉಪಸ್ಥಿತರಿದ್ದರು.