Advertisement

ಎಲ್ಲೆಲ್ಲೂ ಮಹಾಲಕ್ಷ್ಮೀ ಆರಾಧನೆ

06:43 PM Nov 05, 2021 | Team Udayavani |

ಗದಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಅಮಾವಾಸ್ಯೆ ನಿಮಿತ್ತ ಮನೆ, ಅಂಗಡಿ, ಮುಂಗಟ್ಟುಗಳು ಹಾಗೂ ಹೋಟೆಲ್‌ಗ‌ಳಲ್ಲಿ ಮಹಾಲಕ್ಷ್ಮೀ-ಕುಬೇರ ಪೂಜೆ, ತಾಯಿ ಧನಲಕ್ಷ್ಮೀ ಆರಾಧನೆ ಜೋರಾಗಿತ್ತು. ಮಹಿಳೆಯರು ನೂತನ ವಸ್ತ್ರ, ಚಿನ್ನಾಭರಣಗಳನ್ನು ಧರಿಸಿ ಗಮನ ಸೆಳೆದರೆ, ಮುದ್ದು ಮಕ್ಕಳು, ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Advertisement

ದೀಪಾವಳಿ ಆಚರಣೆಗಾಗಿ ಜಿಲ್ಲಾದ್ಯಂತ ಮಹಿಳೆಯರು ಬೆಳಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಾದ ಪುಟ್ಟರಾಜ ಕವಿ ಗವಾಯಿಗಳ ಆಶ್ರಮ, ಸಾಯಿಬಾಬಾ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ, ಜೋಡು ಮಾರುತಿ, ಗಂಗಾಪುರ ಪೇಟೆ ದುರ್ಗಾದೇವಿ, ಬೆಟಗೇರಿಯ ಬನಶಂಕರಿ ದೇವಸ್ಥಾನ ಸೇರಿದಂತೆ ಅವಳಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ದೀಪಾವಳಿ ಹಬ್ಬದಂದೇ ಹೊಸದಾಗಿ ವಾಹನಗಳ ಖರೀದಿಸಿದವರು ತಮ್ಮ ಇಷ್ಟ ದೇವರ ಸನ್ನಿಧಾನದಲ್ಲಿ ನೂತನ ವಾಹನಗಳಿಗೆ ಪೂಜೆ ನೆರವೇರಿಸಿದರು. ಮನೆ-ಮನ ಬೆಳಗಿದ ದೀವಿಗೆ: ಬಾನಂಗಳದಲ್ಲಿ ಕತ್ತಲೆ ಆವರಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲೂ ಹಣತೆಯ ದೀಪಗಳು ಮನೆ-ಮನಗಳನ್ನು ಬೆಳಗಿದವು. ದೀಪಾವಳಿ ನಿಮಿತ್ತ ಬಹುತೇಕರು ತಮ್ಮ ಮನೆಯ ಮುಖ್ಯ ಬಾಗಿಲು, ಕಿಟಕಿ ಹಾಗೂ ಕಾಂಪೌಂಡ್‌ ಗೋಡೆಗಳ ಮೇಲೆ ಹಣತೆಗಳನ್ನು ಸಾಲು ಸಾಲಾಗಿ ಹಚ್ಚಿ, ಬೆಳಕು ಮೂಡಿಸಿರುವುದು ನೋಡುಗರಿಗೆ ಮುದ ನೀಡಿತು.

ಬಾಗಿಲು ಹಾಗೂ ದೇವರ ಮಂಟಪಗಳನ್ನು ಬಾಳೆ ಎಲೆ ಹಾಗೂ ಮಾವಿನ ಎಲೆಗಳಿಂದ ಅಂಲಕರಿಸಲಾಗಿತ್ತು. ಇನ್ನು ಕೆಲವರು ಮನೆ ಹಾಗೂ ಅಂಗಡಿ, ಮುಂಗಟ್ಟುಗಳನ್ನು ವರ್ಣರಂಜಿತ ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದರಿಂದ ಬೆಳಕಿನ ಕಿರಣಗಳ ಮಧ್ಯೆ ಕಟ್ಟಡಗಳು ಝಗಮಗಿಸುತ್ತಿದ್ದವು.

ಎಲ್ಲೆಲ್ಲೂ ಲಕ್ಷ್ಮೀದೇವಿ ಆರಾಧನೆ: ಅವಳಿ ನಗರದ ಸಾವಿರಾರು ಅಂಗಡಿ, ಮುಂಗಟ್ಟುಗಳು, ನೂರಾರು ಹೋಟೆಲ್‌ಗ‌ಳಲ್ಲಿ ಅರ್ಚಕರು ಮಹಾಗಣಪತಿ ಹಾಗೂ ತಾಯಿ ಅಷ್ಟಲಕ್ಷ್ಮೀಯರ ಪೂಜೆ ನೆರವೇರಿಸಿದರು. ಜೊತೆಗೆ ಚಿನ್ನಾಭರಣ, ನೋಟುಗಳನಿಟ್ಟು ಮಹಾಲಕ್ಷ್ಮೀ-ಕುಬೇರ ಪೂಜೆ ನೆರವೇರಿಸಲಾಯಿತು.

Advertisement

ಅಷ್ಟೆ„ಶ್ವರ್ಯಗಳನ್ನೂ ಕರುಣಿಸುವಂತೆ ದೇವರಲ್ಲಿ ಅರಿಕೆ ಮಾಡಿಕೊಂಡರು. ಪೂಜೆಗೆ ನೆಂಟರಿಷ್ಟರು, ಸ್ನೇಹಿತರು ಹಾಗೂ ಅಕ್ಕ-ಪಕ್ಕದವರನ್ನು ಆಹ್ವಾನಿಸಿ, ಬಾಳೆ ಹಣ್ಣು, ಎಲೆ-ಅಡಕೆ ಹಾಗೂ ಉಪಹಾರ ನೀಡಿ ಸತ್ಕರಿಸಿದರು. ಸ್ಥಿತಿವಂತ ಉದ್ಯಮಿಗಳು ಹಬ್ಬದೂಟ ಬಡಿಸಿ, ತಾಯಿ ಲಕ್ಷ್ಮೀದೇವಿ ಕೃಪೆಗೆ ಪಾತ್ರರಾದರು. ಇನ್ನುಳಿದಂತೆ ಮನೆಗಳಲ್ಲೂ ಮುತ್ತೆ$çದೆಯರು ತಾಯಿ ಲಕ್ಷ್ಮೀದೇವಿ, ಗೌವರಮ್ಮನ ಪೂಜೆ ನೆರವೇರಿಸಿದರು. ಮನೆಯ ದೇವರ ಕೋಣೆಯಲ್ಲಿ ಕಳಶ ಹಾಗೂ ಮಡಿ ನೀರು ತುಂಬಿದ್ದ ಕಂಚಿನ ತಂಬಿಗೆಯಲ್ಲಿ ತೆಂಗಿನ ಕಾಯಿಗೆ ಸೀರೆಯನ್ನುಡಿಸಿ, ವಿವಿಧ ಹೂವುಗಳಿಂದ ಲಕ್ಷ್ಮೀ ದೇವಿ ಪ್ರತಿಮೆ ತಯಾರಿಸಿ, ಭಕ್ತಿಯಿಂದ ಪೂಜಿಸಿದರು. ಈ ವೇಳೆ ನೆರೆಹೊರೆಯ ಮಹಿಳೆಯರನ್ನು ಮನೆಗೆ ಆಹ್ವಾನಿಸಿ, ಪರಸ್ಪರ ಅರಿಷಿಣ, ಕುಂಕುಮ ಹಚ್ಚಿಕೊಂಡು ಹಬ್ಬದ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next