Advertisement

ಆನಂದ ಗುರುಜಿ ಸಾನ್ನಿಧ್ಯ: ಜೂ.9ರಂದು ಮಹಾಲಕ್ಷ್ಮೀ ಅನುಷ್ಠಾನ

02:04 PM Jun 07, 2019 | Vishnu Das |

ಸೊಲ್ಲಾಪುರ: ಬೆಂಗಳೂರಿನ ಪರಮ ಪೂಜ್ಯ ಡಾ| ಮರ್ಹವಾಣಿ ಆನಂದ ಗುರುಜಿ ಇವರ ಸಾನ್ನಿಧ್ಯದಲ್ಲಿ ಲೋಕ ಕಲ್ಯಾಣಕ್ಕಾಗಿ ಅಕ್ಕಲಕೋಟ ರಸ್ತೆಯ ಹರಣಿನಗರದಲ್ಲಿ ಜೂ.9ರಂದು ಸಂಜೆ 6 ಗಂಟೆಗೆ ಮಹಾಲಕ್ಷ್ಮೀ ಅನುಷ್ಠಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ಬಸವರಾಜ ಮಾಳಿ-ಪಾಟೀಲ್‌ ತಿಳಿಸಿದ್ದಾರೆ.

Advertisement

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪರಮ ಪೂಜ್ಯ ಡಾ| ಮರ್ಹವಾಣಿ ಗುರುಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಕ್ಕಾಗಿ ಮಹಾಲಕ್ಷ್ಮೀ ಅನುಷ್ಠಾನ, ಚಂಡಿಕಾ ಮಹಾಯಜ್ಞ ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಮಹಾಮಂ ತ್ರೋಪದೇಶ‌ ಸೇರಿದಂತೆ ವಿವಿಧ ಧಾರ್ಮಿಕ ಕಾಕ್ರಮಗಳನ್ನು ಹಮ್ಮಿಕೊ ಳ್ಳಲಾಗಿದೆ ಎಂದು ಹೇಳಿದ್ದಾರೆ.

ಗೌಡಗಾಂವ್‌ ಮಠದ ಪೂಜ್ಯ ಹಾಗೂ ನೂತನ ಸಂಸದ ಡಾ| ಜಯಸಿ ದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೋಟಗಿ ಮಠದ ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ, ಪೂಜ್ಯ ದೇವಪ್ರಸಾದ ಸ್ವಾಮೀಜಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ್‌ ದೇಶು¾ಖ್‌, ಸಹಕಾರಿ ಸಚಿವ ಸುಭಾಷ್‌ ದೇಶು¾ಖ್‌, ಶಾಸಕ ಸಿದ್ಧರಾಮ ಮೆØàತ್ರೆ, ಬಾಬುಭಾಯಿ ಮೆಹ್ತಾ ಮತ್ತು ಇನ್ನಿತರರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಝೀ ಟಿವಿ ಕನ್ನಡ ಮೂಲಕ ಪರಮ ಪೂಜ್ಯ ಡಾ| ಮರ್ಹವಾಣಿ ಆನಂದ ಗುರುಜಿ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಆದ್ದರಿಂದ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡು ಗುರುಗಳ ದರ್ಶನ ಮತ್ತು ಪ್ರಸಾದ ಸ್ವೀಕರಿಸಬೇಕಾಗಿ, ಅಲ್ಲದೆ ಮಹಾಲಕ್ಷ್ಮೀ ಅನುಷ್ಠಾನ ಪೂಜೆಗೆ ಭಾಗವಹಿಸುವ ಭಕ್ತರಿಗೆ ಪೂಜಾ ಸಾಹಿತ್ಯಗಳನ್ನು ಆಯೋಜಕರಿಂದ ಉಚಿತವಾಗಿ ನೀಡಲಾಗುವುದು.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0217-2652155 ಅನ್ನು ಸಂಪರ್ಕಿ ಸಬಹುದು ಎಂದು ಸಂಯೋಜಕ ಬಸವರಾಜ ಮಾಳಿ-ಪಾಟೀಲ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಟ್ಟಾ ಪ್ರಸನ್ನಾ ಬಾಬು, ಶ್ರೀಕಾಂತ್‌ ರಾಥೋಡ್‌, ಅಣ್ಣಾರಾವ್‌ ಬಾರಾಚಾರಿ, ಯೋಗಿರಾಜ್‌ ಕಡತೆ, ಸಂದೀಪ್‌ ಜವ್ಹೇರಿ ಸೇರಿದಂತೆ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next