Advertisement

ಮಹಾಘಟಬಂಧನ್‌ ಅರ್ಥವಿಲ್ಲದ ಕೂಟ: ಜಗದೀಶ ಶೆಟ್ಟರ್‌

10:51 PM Apr 09, 2019 | Team Udayavani |

ಲಿಂಗಸುಗೂರು: ಮಹಾಘಟಬಂಧನ್‌ ಈಗ ಮೂರಾಬಟ್ಟೆಯಾಗಿದೆ. ಇದೊಂದು ಅರ್ಥವಿಲ್ಲದ ಕೂಟ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಘಟಬಂಧನ್‌ ಕೂಟ ರಚಿಸಿಕೊಂಡು ದೇವೇಗೌಡರು ಪಶ್ಚಿಮ ಬಂಗಾಳಕ್ಕೆ ಹೋದಾಗ ಮಮತಾ ಬ್ಯಾನರ್ಜಿ ಪ್ರಧಾನಿ ಆಗಲಿ ಎನ್ನುವುದು, ಒಂದೆ‌ಡೆ ರಾಹುಲ್‌ ಆಗಲಿ, ಮತ್ತೂಂದೆಡೆ ಚಂದ್ರಬಾಬು ನಾಯ್ಡು ಆಗಲಿ ಎನ್ನುವುದು, ಇಲ್ಲವೇ ನನಗೆ ಅವಕಾಶ ಕೊಡಿ ಎಂದು ಕೇಳುತ್ತಾರೆ.

ಇದೊಂದು ಅರ್ಥವಿಲ್ಲದ ಕೂಟ. ಒಂದು ವೇಳೆ ಮಹಾಘಟಬಂಧನ್‌ ಇದ್ದರೆ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದರು. ಬಿಜೆಪಿಯಲ್ಲಿ ಯಾವುದೇ ವರ್ಗ, ಧರ್ಮ, ಜಾತಿಯನ್ನು ದೂರವಿಡುವ ಪ್ರಮೇಯವೇ ಇಲ್ಲ.

ಮುಸ್ಲಿಂ ಸಮಾಜದವರು ಮುಖ್ಯವಾಹಿನಿಗೆ ಬರಬಾರದು ಹಾಗೂ ಬಿಜೆಪಿಗೆ ಹೋಗಬಾರದು ಎಂಬ ಕುತಂತ್ರದಿಂದ ಕಾಂಗ್ರೆಸ್‌ ಮುಸ್ಲಿಮರಲ್ಲಿ ಬಿಜೆಪಿ ವಿರುದ್ಧ ವಿಷ ಬೀಜ ಬಿತ್ತಿ ತನ್ನ ಬೇಳೆ ಬೇಯಿಸಿಕೊಂಡಿದೆ. ಮುಸ್ಲಿಂ ಸಮಾಜದಲ್ಲಿ ಪರಿವರ್ತನೆಯಾಗಿದೆ. ಈಗ ನರೇಂದ್ರ ಮೋದಿ ಆಡಳಿತವನ್ನು ಮೆಚ್ಚಿ ಮುಸ್ಲಿಂ ಸಮಾಜದ ಯುವಕರು ಬಿಜೆಪಿ ಸೇರುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next