Advertisement
ಕಾಡುಗುಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಿಂದ ಕೂಡಿರುವ ಭಾರತದಲ್ಲಿ ವಿವಿಧ ವಿಚಾರಗಳಿಂದ ಬಿಕ್ಕಟ್ಟು ಮೂಡುತ್ತಿದೆ.
Related Articles
Advertisement
ಅವರ ಪಕ್ಷದ ಸಿದ್ಧಾಂತದ ಬಗ್ಗೆ ನಮಗೆ ಭಿನ್ನಾಭಿಪ್ರಯ ಇರಬಹುದು. ಆದರೆ, ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಮೇಲಾಗಿ ಇಡೀ ದೇಶಕ್ಕೆ ಅವರೇ ಪ್ರಧಾನಮಂತ್ರಿ. ಹೀಗಾಗಿ ಮಹದಾಯಿಗೆ ಸಂಬಂಧಿಸಿದ ರಾಜ್ಯಗಳನ್ನು ಂದೆಡೆ ಸೇರಿಸಿ, ಚರ್ಚಿಸಿ ಸಮಸ್ಯೆ ಪರಿಹರಿಸಬೇಕು. ಈ ಮೂಲಕ ಮನೆ ಯಜಮಾನನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಚಂಪಾ ಹೇಳಿದರು.
ಕೃತಿಗಳ ಮೆರವಣಿಗೆ ಮಾಡಿ: ಸಮ್ಮೇಳನಾಧ್ಯಕ್ಷ ಕೋಟಗಾನಹಳ್ಳಿ ರಾಮಯ್ಯ ಅವರು ಮಾತನಾಡಿ, “ಅದ್ಧೂರಿತನದಿಂದ ಭಾಷೆ ಬೆಳೆಯುವುದಿಲ್ಲ. ಇದೇ ಉದ್ದೇಶದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮಾಡದಂತೆ ತಿಳಿಸಿದ್ದೆ. ಹಿಂದೆ ಕೋಲಾರದಲ್ಲಿ ನಡೆದ ಸಮ್ಮೇಳನದಲ್ಲೂ ನಾನು ಸಾರೋಟು ಏರಿರಲಿಲ್ಲ.
ಸಾರೋಟಿನಲ್ಲಿ ಕವಿ ಕೂರುವ ಅಗತ್ಯವಿಲ್ಲ. ಆತನ ಬದಲಿಗೆ ಮೇರು ಕೃತಿಗಳನ್ನಿರಿಸಿ ಮೆರವಣಿಗೆ ಮಾಡಬೇಕು. ಯಾವುದೇ ಸಮಾರಂಭ, ಸಮ್ಮೇಳನ, ಸಮಾವೇಶ ಆಯೋಜಿಸಿದರೂ ಸಂಪ್ರದಾಯ, ಅದ್ಧೂರಿತನ ಬಿಟ್ಟು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು,’ ಎಂದು ಸಲಹೆ ನೀಡಿದರು.
ಕಾಡುಗುಡಿಯಲ್ಲಿ 20 ವರ್ಷಗಳ ಹಿಂದೆ ಮಕ್ಕಳ ಮೇಳ ನಡೆಸಿದ ನೆನಪಿದೆ. ಬಿ.ವಿ.ಕಾರಂತರು, ಇಕ್ಬಾಲ್ ಅನ್ಸಾರಿ ಅವರು ನಟಕ ರಚಿಸಿದ್ದ ವೇದಿಕೆ ಇದು. ಇಂಥ ಖ್ಯಾತನಾಮರ ನೇತೃತ್ವದಲ್ಲಿ ಕಾಡುಗುಡಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳು, ರಂಗಮಂಟಪಕ್ಕೆ ಮಾದರಿ ಎಂಬಂತೆ ಮೂಡಿಬರುತ್ತಿದ್ದವು. ಹಾಗೇ ರಂಗಾಯಣ ಕಲಾವಿದರು ಮಕ್ಕಳ ಮೇಳಕ್ಕೆ ದೊಡ್ಡ ಕಾಣಿಕೆ ನೀಡಿದ್ದಾರೆ ಎಂದು ಸ್ಮರಿಸಿದರು.
ಚನ್ನಸಂದ್ರ ಸರ್ಕಾರಿ ಶಾಲೆಯಿಂದ ಕಾಡುಗುಡಿಯಲ್ಲಿ ಸಿದ್ಧಪಡಿಸಿದ್ದ ಸಾಹಿತ್ಯ ಸಮ್ಮೇಳನದ ವೇದಿಕೆವರೆಗೂ ಕನ್ನಡ ಜಾಗೃತಿ ಮೆರವಣಿಗೆ ನಡೆಯಿತು. ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದವು. ಸಮ್ಮೇಳನದ ಅಂಗವಾಗಿ ಶಾಲೆ ಆವರಣದಲ್ಲಿ ಕನ್ನಡ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು.
ಇದೇ ವೇಳೆ ಬೆಳ್ಳಂದೂರು ವಾರ್ಡ್ ಕಸಾಪ ವತಿಯಿಂದ ಆಯೋಜಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು.ಚಿತ್ರ ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ನಾಡೋಜ ಡಾ.ಮಹೇಶ್ ಜೋಷಿ, ಡಾ.ಬಾನಂದೂರು ಕೆಂಪಯ್ಯ, ಸಾಹಿತಿ ಬಿ.ಆರ್.ಲಕ್ಷ್ಮಣರಾವ್, ಬೈರಮಂಗಲ ರಾಮೇಗೌಡ, ಅಜಿತ್ ಕುಮಾರ್, ಪಾಲಿಕೆ ಸದಸ್ಯರಾದ ಎಸ್.ಮುನಿಸ್ವಾಮಿ, ಶ್ವೇತಾ ವಿಜಯ್ ಕುಮಾರ್, ಪರಿಸರ ಮಂಜುನಾಥ್ ಇತರರು ಪಾಲ್ಗೊಂಡಿದರು.