Advertisement

ಮಾಗಡಿ: ಮಹದೇಶ್ವರಸ್ವಾಮಿ ಅಗ್ನಿಕೊಂಡೋತ್ಸವ

11:31 AM Mar 16, 2021 | Team Udayavani |

ಮಾಗಡಿ: ತಾಲೂಕಿನ ಮೋಟೇಗೌಡನಪಾಳ್ಯದ ಬೆಟ್ಟದ ಪ್ರಕೃತಿ ಮಡಿಲಲ್ಲಿ ನೆಲೆಸಿರುವಮಹದೇಶ್ವರಸ್ವಾಮಿ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ರಥೋತ್ಸವಹಾಗೂ ಅಗ್ನಿಕೊಂಡೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.

Advertisement

ಸುತ್ತಮುತ್ತಲಿನಿಂದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಉಘೇ.. ಉಘೇ…ಮಹದೇಶ್ವರ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ರಥೋತ್ಸವದ ಹಾಗೂ ಅಗ್ನಿಕೊಂಡೊತ್ಸವದಪ್ರಯುಕ್ತ ಮೋಟೆಗೌಡನಪಾಳ್ಯ, ಕುರುಪಾಳ್ಯ, ಹನುಮಾಪುರ, ವಿಠಲಾಪುರ, ಚೆನ್ನಮ್ಮನಪಾಳ್ಯ,ಚಂದೂರಾಯನಹಳ್ಳಿ, ಹೂಜಿಗಲ್‌, ಮಾಯನಾಯಕನಹಳ್ಳಿ, ತಗ್ಗೀಕುಪ್ಪೆ ಹಾಗೂಸುತ್ತಮುತ್ತಲಿನ ಗ್ರಾಮಸ್ಥರಿಂದ ಆಗ್ನಿಕೊಂಡಕ್ಕೆ ಸೌದೆಭವ್ಯ ಮೆರವಣಿಗೆಯಲ್ಲಿ ತಂದು ಅಗ್ನಿಕೊಂಡಕ್ಕೆ ಹಾಕಿದರು. ಅರ್ಚಕ ಜಯಣ್ಣ, ದೇವರಾಜುವಿಧಿಬದ್ಧವಾಗಿ ಪೂಜೆ ಸಲ್ಲಿಸುವ ಮೂಲಕ ಕೊಂಡ ಹಾಯ್ದರು.

ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ತಂಬಿಟ್ಟಿ ನಾರತಿ ಹೊತ್ತು. ಮಹದೇಶ್ವರ ಸ್ವಾಮಿ ದೇವಸ್ಥಾನದಸುತ್ತಲು ಮೂರು ಪ್ರದಕ್ಷಣೆ ಹಾಕಿ ದೇವರಿಗೆ ಶ್ರದ್ಧಾಭಕ್ತಿಯಿಂದ ಆರತಿ ಬೆಳಗಿಸಿದರು. ಆರತಿಹೊತ್ತಮಹಿಳೆಯರು ಉತ್ಸವ ಮೂರ್ತಿಯೊಂದಿಗೆಅಗ್ನಿಕೊಂಡ ಸುತ್ತುಪ್ರದಕ್ಷಣೆ ಹಾಕಿ ಅಗ್ನಿಕೊಂಡಹಾಯ್ದರು. ರಥೋತ್ಸವದ ಪ್ರಯುಕ್ತ ಸಾರ್ವಜನಿಕಅನ್ನಸಂತರ್ಪಣೆ ನೆರವೇರಿತು.

ಟ್ರಸ್ಟ್‌ ಅಧ್ಯಕ್ಷ ಆರ್‌.ರಂಗಸ್ವಾಮಿ, ಕಾರ್ಯದರ್ಶಿಜಯರಂಗಯ್ಯ, ಉಪಾಧ್ಯಕ್ಷ ಎ.ಆರ್‌.ರಂಗಸ್ವಾಮಯ್ಯ, ಖಜಾಂಚಿ ಎಚ್‌.ಎಂ.ನಾಗರಾಜು,ಕಾನೂನು ಸಲಹೆಗಾರ ಆರ್‌.ಪುಟ್ಟಸ್ವಾಮಿ, ಧರ್ಮದರ್ಶಿ ರಂಗನಾಥ್‌, ಎಚ್‌.ಜಿ.ಚಿಕ್ಕಣ್ಣ, ಶ್ರೀನಿವಾಸ್‌,ಮಾರೇಗೌಡ, ಕುಮಾರ್‌, ಸೋಮಶೇಖರ್‌ಚೆನ್ನಮ್ಮಪಾಳ್ಯದ ಕೃಷ್ಣಪ್ಪ, ಜಯರಂಗಯ್ಯ, ವೆಂಕಟೇಶ್‌ಮೂರ್ತಿ, ನರಸಿಂಹಮೂರ್ತಿ, ಅರುಂಧತಿ, ಕೆಂಪಣ್ಣ,ಎಪಿಎಂಸಿ ನಿರ್ದೇಶಕ ಕೆ.ಟಿ.ಮಂಜುನಾಥ್‌, ರಂಗಪ್ಪ, ಶ್ರೀನಿವಾಸ್‌, ಮಲ್ಲಿಕಾರ್ಜನಸ್ವಾಮಿ, ರಂಗನಾಥ್‌, ಜಯಣ್ಣ, ದೇವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next