Advertisement

ಮಹಾದಾಯಿಗೆ ಮತ್ತೆ ಗೋವಾ ಕ್ಯಾತೆ : ಸಾವಂತ್‌ ಬೇಡಿಕೆಗೆ ಬಗ್ಗದ ಕೇಂದ್ರ

10:26 AM Aug 09, 2020 | sudhir |

ಪಣಜಿ: ಕಳಸಾ-ಬಂಡೂರಿ, ಮಹಾದಾಯಿ ಯೋಜನೆ ಕಾಮಗಾರಿ ಆರಂಭಿಸಲು ಕರ್ನಾಟಕಕ್ಕೆ ಅನುಮತಿ ನೀಡುವ ಮೊದಲು ನಮ್ಮ ಆಕ್ಷೇಪಣೆಯನ್ನೂ ಪರಿಗಣಿಸ ಬೇಕೆಂದು ಗೋವಾ ಮತ್ತೆ ಕ್ಯಾತೆ ತೆಗೆದಿದೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌, ಮಹಾದಾಯಿ ಯೋಜನೆ ಆರಂಭಕ್ಕೆ ಬೇರೆ ರಾಜ್ಯಗಳ ಒಪ್ಪಿಗೆ ಪಡೆದುಕೊಳ್ಳುವ ಯಾವುದೇ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಗಜೇಂದ್ರಸಿಂಗ್‌  ಶೇಖಾವತ್‌ ಅವರಿಗೆ ಪತ್ರ ಬರೆದಿರುವ ಗೋವಾ ಸಿಎಂ ಪ್ರಮೋದ್‌ ಸಾವಂತ್‌, ಬೆಳಗಾವಿಯ ಖಾನಾಪುರ ತಾಲೂಕಿನ ಕಳಸಾ-ಬಂಡೂರಿ ಯೋಜನೆ ವಿಷಯದಲ್ಲಿ ಗೋವಾದ ಆಕ್ಷೇಪವಿದೆ. ಗೋವಾಕ್ಕೆ ಸೂಚನೆ ನೀಡದೆ ಅಥವಾ ಗೋವಾದ ಆಕ್ಷೇಪ ಪರಿಗಣಿಸದೆ ಕರ್ನಾಟಕದ ಈ ಯೋಜನೆಗೆ ಅನುಮತಿ ನೀಡಬಾರದು. ಕರ್ನಾಟಕ ಸರಕಾರವು ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿ ಯೋಜನೆ ವರದಿ ಸಾದರಪಡಿಸಿದ್ದರೆ ಅದರ ಪ್ರತಿ ಗೋವಾ ಸರಕಾರಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಗೋವಾದ ಪತ್ರವನ್ನು ಕೇಂದ್ರ ದಾಖಲಿಸಿಕೊಂಡಿದೆ. ಈ ಕುರಿತು ಗೋವಾ ಸಿಎಂಗೆ ಮರು ಪತ್ರ ಬರೆದಿರುವ ಗಜೇಂದ್ರ ಸಿಂಗ್‌, ಕರ್ನಾಟಕವು ಕಳಸಾ – ಬಂಡೂರಿ ಯೋಜನೆ ಕಾಮಗಾರಿಗೆ ವಿವಿಧ ಅನುಮತಿ ಪಡೆಯಬೇಕಿದೆ. ಆದರೆ ಇದಕ್ಕೆ ಬೇರೆ ರಾಜ್ಯಗಳ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next