Advertisement

ಮಹದಾಯಿ ನದಿ ನೀರು ಕುರಿತ ಸಭೆಗೆ ಅನುಮತಿ ನಿರಾಕರಣೆ: ಗೋವಾ ಸರಕಾರದ ವಿರುದ್ಧ ಕಾಂಗ್ರೆಸ್ ಗರಂ

06:50 PM Jan 14, 2023 | Team Udayavani |

ಪಣಜಿ: ಮಹದಾಯಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಗೋವಾದ ಸಾಖಳಿಯಲ್ಲಿ ಆಯೋಜಿಸಿದ್ದ  ಸಭೆಗೆ ಸರ್ಕಾರ ಅನುಮತಿ ನಿರಾಕರಿಸಿರುವುದಕ್ಕೆ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಗಿರೀಶ್ ಚೋಡಣಕರ್ ಗೋವಾ ರಾಜ್ಯ ಸರ್ಕಾರದ ವಿರುದ್ಧ ಠೀಕಾಪ್ರಹಾರ ನಡೆಸಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಅಡಾಲ್ಫ್ ಹಿಟ್ಲರ್ ಎಂದು ಕರೆದಿರುವ ಚೋಡಣಕರ್ ಅವರು ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ. ಇದು ಜನರ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.  ಕಾಂಗ್ರೆಸ್ ಪಕ್ಷವು 1980 ರ ದಶಕದಿಂದಲೂ ಉತ್ತಮ ಮತ್ತು ಪರಿಣಾಮಕಾರಿ ಆಡಳಿತವನ್ನು ನಡೆಸುತ್ತಿರುವಾಗ, ಹಲವಾರು ಆಕ್ರಮಣಕಾರಿ ಆಂದೋಲನಗಳನ್ನು ಎದುರಿಸಿದೆ. ಆದರೆ ಕಾಂಗ್ರೇಸ್ ಪಕ್ಷವು ವಿದ್ಯಾರ್ಥಿಗಳು, ಟ್ರೇಡ್ ಯೂನಿಯನ್‍ಗಳು, ಆದಿವಾಸಿಗಳು, ಸಾಂಪ್ರದಾಯಿಕ ಮೀನುಗಾರರು , ಮೋಟಾರ್‍ಸೈಕಲ್ ಪೈಲಟ್‍ಗಳು, ಕೊಂಕಣಿ ಚಳುವಳಿ, ಕೊಂಕಣ ರೈಲ್ವೇ, , ಹೀಗೆ ವಿವಿಧ  ಪ್ರತಿಭಟನೆಗಳಲ್ಲಿ ಕಾಂಗ್ರೆಸ್ ಎಂದಿಗೂ ಪ್ರಜಾಪ್ರಭುತ್ವದ ಜನರ ಹಕ್ಕನ್ನು ಹತ್ತಿಕ್ಕಲಿಲ್ಲ ಎಂದು ಗೋವಾ ರಾಜ್ಯ ಕಾಂಗ್ರೇಸ್ ಮಾಜಿ ರಾಜ್ಯಾಧ್ಯಕ್ಷ ಗಿರೀಶ್ ಚೋಡಣಕರ್ ಹೇಳಿದ್ದಾರೆ.

ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಶಾಂತಿಯುತವಾಗಿ ಸೇರುವ ಹಕ್ಕನ್ನು ನೀಡಿದೆ, ಸರ್ಕಾರದ ಕ್ರಮಗಳ ವಿರುದ್ಧ ಪ್ರತಿಭಟನೆ, ಆಂದೋಲನ ಮತ್ತು ಸಾರ್ವಜನಿಕ ಸಭೆಗಳ ಮೂಲಕ ಪ್ರತಿಭಟಿಸುತ್ತದೆ. ಆದರೆ ಬಿಜೆಪಿ ಸರ್ಕಾರವು  ಜನರ ಈ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ರಾಜ್ಯ ಸಂವಿಧಾನದಿಂದ ಮಾನ್ಯತೆ ಪಡೆದಿರುವ ಗಾಂಧಿ ಸಿದ್ಧಾಂತ, ಸುಪ್ರೀಂ ಕೋರ್ಟ್ ಮತ್ತು ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆಯೇ? ಎಂದು ಪ್ರಶ್ನಿಸಿದ ಅವರು,  ಸಂವಿಧಾನದ ಆಶಯವನ್ನು ಕಾಪಾಡಲು ಮತ್ತು ಜನರನ್ನು ಬಲಪಡಿಸಲು ಬಿಜೆಪಿಯು  ಕಾಂಗ್ರೆಸ್‍ನಿಂದ ಪಾಠ ಕಲಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next