Advertisement

ಪಣಜಿ: ಮಾಂಡವಿ ನದಿಯಲ್ಲಿ ಲವಣಾಂಶ ಪರೀಕ್ಷೆ ನಡೆಸಿದ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ತಂಡ ಈ ನದಿಯಲ್ಲಿ ಲವಣಾಂಶ ಹೆಚ್ಚಾಗಿರುವುದು ಕಂಡುಹಿಡಿದಿದೆ ಎಂದು ಗೋವಾದ ಪರಿಸರ ವಾದಿ ರಾಜೇಂದ್ರ ಕೇರಕರ್‌ ಮಾಹಿತಿ ನೀಡಿದ್ದಾರೆ.

Advertisement

ಕಳೆದ ಕೆಲ ದಿನಗಳ ಹಿಂದೆ ಎರಡನೇಯ ಬಾರಿ ಮಹದಾಯಿ ನದಿಯ ಲವಣಾಂಶದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ಡಾ| ಗೋಪಾಲಕೃಷ್ಣ ಮತ್ತು ಎನ್‌. ಪಟೀಕರ್‌ ಅವರನ್ನೊಳಗೊಂಡ ತಂಡವು ಗೋವಾಕ್ಕೆ ಆಗಮಿಸಿ ಮಹದಾಯಿ ನದಿಯ ವಿವಿಧೆಡೆ ಒಟ್ಟೂ 14 ಸ್ಥಳಗಳಿಂದ ನೀರನ್ನು ಸಂಗ್ರಹಿಸಿತ್ತು. ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಈ ನದಿಯ ನೀರಿನ ಲವಣಾಂಶ ತಪಾಸಣೆ ನಡೆಸಲಾಗಿತ್ತು ಎಂದು ಪ್ರಸರ ವಾದಿ ರಾಜೇಂದ್ರ ಕೇರಕರ್‌ ಮಾಹಿತಿ ನೀಡಿದರು.

ಪಶ್ಚಿಮ ಕರಾವಳಿಯಲ್ಲಿರು ವಂತೆಯೇ ಗೋವಾದ ಪ್ರಮುಖ ಸಮಸ್ಯೆ ಲವಣಾಂಶದ ಸಮಸ್ಯೆ ಯಾಗಿದೆ. ಲವಣಾಂಶ ಹೆಚ್ಚಾದರೆ ಸಮಸ್ಯೆಯುಂಟಾಗುತ್ತದೆ. ಈ ತಜ್ಞರ ತಂಡವು ಶೀಘ್ರದಲ್ಲಿಯೇ ವರದಿಯನ್ನು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಲಿದೆ ಎಂದು ರಾಜೇಂದ್ರ ಕೇರಕರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next