Advertisement

ಮಹದಾಯಿ ತಿರುಗಿಸಿ ಕೊಳ್ಳಲು ಸಾಧ್ಯವೇ ಇಲ್ಲ

11:34 PM Mar 01, 2020 | Lakshmi GovindaRaj |

ಪಣಜಿ: ಕರ್ನಾಟಕ ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು. ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ಪ್ರಕರಣದಲ್ಲಿ ಯಾರು ರಾಜಕಾರಣ ಮಾಡುತ್ತಿದ್ದಾರೋ ಅವರು ಯಾವತ್ತೂ ಮಹದಾಯಿ ನದಿ ಹುಟ್ಟುವ ಮತ್ತು ಹರಿಯುವ ಪ್ರದೇಶಗಳಿಗೆ ಭೇಟಿ ನೀಡಿಯೇ ಇಲ್ಲ.

Advertisement

ಗೋವಾದಲ್ಲಿ ಎಷ್ಟು ಯೋಜನೆಗಳು ಮಹದಾಯಿ ನದಿ ನೀರು ಅವಲಂಬಿಸಿವೆ ಎಂಬುದೂ ಅವರಿಗೆ ಗೊತ್ತಿಲ್ಲವೆಂದರು. ಕರ್ನಾಟಕದ ಮನವಿಯಂತೆ ಕೇಂದ್ರ ಅಧಿಸೂಚನೆ ಹೊರಡಿಸಿದೆ ಎಂದರೆ ಕರ್ನಾಟಕದ ಈ ಯೋಜನೆಗೆ ಕೇಂದ್ರದಿಂದ ಎಲ್ಲ ರೀತಿಯ ಪರವಾನಗಿ ಲಭಿಸುತ್ತದೆ ಎಂದರ್ಥವಲ್ಲ. ವನ್ಯಜೀವಿ ಮಂಡಳಿ ಮತ್ತು ಅರಣ್ಯ ಇಲಾಖೆ ಪರವಾನಗಿ ಲಭಿಸಲು ಹೆಚ್ಚಿನ ಕಾಲಾವಕಾಶ ಹಿಡಿಯುತ್ತದೆ.

ಅಲ್ಲಿಯವರೆಗೆ ಸುಪ್ರೀಂ ಕೋರ್ಟ್‌ನಲ್ಲಿರುವ ಮಹದಾಯಿ ಪ್ರಕರಣದ ಅಂತಿಮ ತೀರ್ಪು ಹೊರಬೀಳಲಿದೆ ಎಂದರು. ಮಹದಾಯಿ ನದಿ ನೀರು ತಿರುಗಿಸಿಕೊಳ್ಳಲು ಕರ್ನಾಟಕ ಕಾಯ್ದೆ ರಹಿತವಾಗಿ ಕಾಮಗಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರೂ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಅ ಧಿಕಾರಿಗಳು ಜಂಟಿಯಾಗಿ ಮಹದಾಯಿ ಪ್ರಕರಣದ ಕಳಸಾ ಬಂಡೂರಿ ನಾಲೆ ಪರಿಶೀಲನೆ ನಡೆಸಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಲಾಗುವುದು ಎಂದರು.

ರಾಜ್ಯದ ನೀರು ಪೂರೈಕೆ ಯೋಜನೆಗಳನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಮಹದಾಯಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಜಯ ಗಳಿಸಲೇಬೇಕಿದೆ. ಹೀಗಾಗಿ ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ಸರ್ವೋತ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next