Advertisement

ಗೋವೆಗೆ ಕಡಿವಾಣ ಹಾಕಿ

10:18 AM Jan 01, 2020 | Team Udayavani |

ನವಲಗುಂದ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗಾಗಿ 1625 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ನ್ಯಾಯಾಧಿಕರಣದಲ್ಲಿ 13.5 ಟಿಎಂಸಿ ನೀರು ಹರಿಸಲು ಆದೇಶವಾಗಿದ್ದರೂ ಗೋವಾ ಸರಕಾರ ಪದೇ ಪದೇ ತನ್ನ ಮಾನವೀಯತೆ ಮೀರುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ರೈತರು ತಹಶೀಲ್ದಾರ್‌ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

Advertisement

ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ ಮಾತನಾಡಿ, 28 ಸಂಸದರಲ್ಲಿ 25 ಜನ ಬಿಜೆಪಿ ಸಂಸದರಿದ್ದಾರೆ. ಅವರಲ್ಲಿ ಇದೇ ಭಾಗದವರಾದ ಪ್ರಹ್ಲಾದ ಜೋಶಿಯವರು ಇಚ್ಛಾಶಕ್ತಿ ವಹಿಸಿ ಕೆಲಸವನ್ನು ಮಾಡುತ್ತಿಲ್ಲ. ಇತರಿಂದ ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಕರ್ನಾಟಕ ಸರಕಾರ ದೇಶದ ಕಾನೂನಿಗೆ ಒಳಪಟ್ಟಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯದಂತಾಗಿದೆ ಎಂದರು.

ರೈತರಾದ ಮಲ್ಲೇಶ ಉಪ್ಪಾರ, ಸುಭಾಸಚಂದ್ರಗೌಡ ಪಾಟೀಲ, ಡಿ.ವಿ. ಕುರಹಟ್ಟಿ ಮಾತನಾಡಿ, ಇತ್ತೀಚಿಗೆ ಅತಿವೃಷ್ಟಿಯಿಂದ ರೈತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ರೈತ ಕುಲದ ಉಳಿವಿಗಾಗಿ ವಿಶೇಷ ಪ್ಯಾಕೇಜ್‌ ನೀಡಬೇಕು. ಮಹದಾಯಿ ಯೋಜನೆ ಕಾರ್ಯಗತವಾಗಲು ಕೇಂದ್ರ ಸರಕಾರ ಮುತುವರ್ಜಿ ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಸದರು, ಶಾಸಕರು ರೈತರ ಉಗ್ರ ಹೋರಾಟಕ್ಕೆ ಬಲಿಯಾಗಬೇಕಾಗುತ್ತದೆ. ಇದು ನಮ್ಮ ಪಾಲಿನ ನೀರಿನ ಹಕ್ಕನ್ನು ಪಡೆಯಲು ಅನಿವಾರ್ಯವಾಗಿದೆ ಎಂದು ಹೇಳಿದರು.

ಎಚ್‌.ವಿ. ಪಾಟೀಲ, ಮಲ್ಲಪ್ಪ ಬಸಿಗೊಣ್ಣರ, ಸಂಗಪ್ಪ ನಿಡವಣೆ, ಶಿವಪ್ಪ ಸಂಗಳದ, ಬಸಯ್ಯ ಮಠಪತಿ, ಶಿದ್ದಪ್ಪ ಮುಪ್ಪಯ್ಯನವರ, ದ್ಯಾಮಣ್ಣ ಸಾಮೋಜಿ, ಅರುಣ ಈಟಿ, ಗುರುಶಿದ್ದಪ್ಪ ಕಾಲುಂಗುರ, ಅಲ್ಲಾಭಕ್ಷ ಹಂಚಿನಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next