Advertisement

ಚಾಮುಂಡಿಬೆಟ್ಟದ ಬೃಹತ್‌ ನಂದಿಗೆ ಮಹಾಭಿಷೇಕ

12:53 PM Oct 24, 2017 | Team Udayavani |

ಮೈಸೂರು: ಕಾರ್ತೀಕ ಮಾಸದ ಮೊದಲ ಸೋಮವಾರದ ಪ್ರಯುಕ್ತ ಚಾಮುಂಡಿಬೆಟ್ಟದ ಶ್ರೀ ನಂದಿಮೂರ್ತಿಗೆ ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು. ನಗರದ ಮೆಟ್ಟಿಲು ಹತ್ತುವ ಬಳಗದಿಂದ ಸೋಮವಾರ ಆಯೋಜಿಸಿದ್ದ ಮಹಾಭಿಷೇಕದ ಅಂಗವಾಗಿ ನಂದಿಮೂರ್ತಿಯನ್ನು ತೊಳೆದು ಸ್ವತ್ಛಗೊಳಿಸಿ, ವಿವಿಧ ಬಗೆಯ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.

Advertisement

ಪ್ರಮುಖವಾಗಿ ತುಪ್ಪ, ಜೇನು ತುಪ್ಪ, ಕಲ್ಲು ಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಖರ್ಜೂರ, ಎಳನೀರು, ರಜತ, ಸುಗಂಧ ತೈಲ, ವಿಭೂತಿ, ಬಿಲ್ವಪತ್ರೆ, ಅರಿಶಿಣ, ಕುಂಕುಮ ಸೇರಿದಂತೆ 47 ಬಗೆಯ ವಿವಿಧ ದ್ರವ್ಯಗಳಿಂದ ನಂದಿಗೆ ಅಭಿಷೇಕ ಮಾಡಲಾಯಿತು. 15 ಅಡಿ ಎತ್ತರದ ನಂದಿ ವಿಗ್ರಹಕ್ಕೆ ರುದ್ರಾಭಿಷೇಕ ನೆರವೇರಿಸಲು ಅನುಕೂಲವಾಗುವಂತೆ ಅಟ್ಟಣಿಗೆ ನಿರ್ಮಿಸಿ, ಇದರ ನೆರವಿನಿಂದ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.

ಬೆಟ್ಟದ ಮೆಟ್ಟಿಲು ಹತ್ತುವ ಬಳಗದ ಸದಸ್ಯರು ಕಳೆದ 7 ವರ್ಷಗಳಿಂದಲೂ ಕಾರ್ತೀಕ ಮಾಸದ ವೇಳೆ ಮಹಾರುದ್ರಾಭಿಷೇಕ ನಡೆಸುತ್ತಿದ್ದು, ರುದ್ರಾಭಿಷೇಕದ ಪ್ರಯಕ್ತ ಬಳಗದ ಸದಸ್ಯರು ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು, ಬಳಿಕ ರುದ್ರಾಭಿಷೇಕ ನೆರವೇರಿಸಿದರು. ನೂರಾರು ಭಕ್ತರು ಹಾಗೂ ಪ್ರವಾಸಿಗರು ಮಹಾಭಿಷೇಕದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next