Advertisement
ಪ್ರಾಚೀನ ಗ್ರಂಥಗಳ ಲ್ಲೊಂದಾದ ವೇದವ್ಯಾಸ ವಿರಚಿತ ಮಹಾಭಾರತದ ಶುದ್ಧ ಪ್ರತಿಯನ್ನು ಶ್ರಾವಕರಿಗೆ ನೀಡಬೇಕೆನ್ನುವುದು ಪಲಿಮಾರು ಮಠದ ಪೂರ್ವಯತಿ ಶ್ರೀ ವಿದ್ಯಾಮಾನ್ಯತೀರ್ಥರ ಕನಸಾ ಗಿತ್ತು. ಅದೀಗ ನನಸಾಗುತ್ತಿದೆ. 8 ವರ್ಷಗಳಿಂದ ಬೆ.ನಾ. ವಿಜಯೀಂದ್ರಾಚಾರ್ಯ ನೇತೃತ್ವದ 40 ವಿದ್ವಾಂಸರ ತಂಡ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
ಪಲಿಮಾರು ಮಠದ ತಣ್ತೀಸಂಶೋಧನ ಸಂಸತ್ ಮಹಾಭಾರತದ ಕನ್ನಡ 37 ಮತ್ತು ಸಂಸ್ಕೃತದ 24 ಸಂಪುಟಗಳನ್ನು ಇ-ಬುಕ್ ಮತ್ತು ಆ್ಯಂಡ್ರಾಯ್ಡ ಆ್ಯಪ್ ಆಗಿ ಪ್ರಕಟಪಡಿಸುತ್ತಿದೆ. ಈ ಆ್ಯಪನ್ನು ಗೂಗಲ್ ಪ್ಲೇಸ್ಟೋರಿನಲ್ಲಿ ಪಡೆಯ ಬಹುದಾಗಿದೆ. ಆ್ಯಪ್ ಅನ್ನು ಸಂಸ್ಕೃತ ಪಾಠಶಾಲೆಯ ಡಾ| ಕಡಂದಲೆ ಗಣಪತಿ ಭಟ್ ತಂಡ ಅಭಿವೃದ್ಧಿಪಡಿಸಿದೆ. 250 ಪ್ರಾಚೀನ ತಾಳೆ ಪತ್ರ ಬಳಕೆ
ಮಧ್ವಾಚಾರ್ಯರ “ತಾತ್ಪರ್ಯ ನಿರ್ಣಯ’ ಮತ್ತು ವಾದಿರಾಜರ “ಲಕ್ಷಾಲಂಕಾರ’ ಗಳನ್ನು ಸಂಯೋಜಿಸಿಕೊಂಡು 40 ವಿದ್ವಾಂಸರ ಸಹಕಾರದಿಂದ ಮಹಾ ಭಾರತದ ಶುದ್ಧಪ್ರತಿ ಸಿದ್ಧಪಡಿಸಲಾಗಿದೆ. ಪೂರಕವಾಗಿ ಅಷ್ಟಮಠ ಮತ್ತು ಸುಬ್ರಹ್ಮಣ್ಯ ಮಠ ಸೇರಿದಂತೆ ವಿವಿಧೆಡೆಗಳಿಂದ 450ವರ್ಷಕ್ಕೂ ಹಿಂದಿನ 250ಕ್ಕೂ ಹೆಚ್ಚಿನ ಪ್ರಾಚೀನ ತಾಡಪತ್ರಗಳನ್ನು ಕಲೆಹಾಕಿ ಸಂಶೋಧನೆ ನಡೆಸಲಾಗಿದೆ.
Related Articles
-ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ
ಪರ್ಯಾಯ ಶ್ರೀ ಪಲಿಮಾರು ಮಠ.
Advertisement