Advertisement
ರಾಜ್ಯದಲ್ಲಿ ಕೋವಿಡ್ ನಿಯಮಾವಳಿ ಜಾರಿಯಲ್ಲಿರುವುದರಿಂದ ಹಲವು ನಿರ್ಬಂಧಗಳನಡುವೆ ಮಹಾಶಿವರಾತ್ರಿಯ ವಿಶೇಷ ಪೂಜಾಕೈಂಕರ್ಯಗಳು ಜರುಗಲಿವೆ. ಸೋಮವಾರಮಹಾಶಿವರಾತ್ರಿ ಜಾತ್ರೆಗೆ ಚಾಲನೆ ಸಿಗಲಿದ್ದು,ಮಂಗಳವಾರ ಮಲೆ ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಶಿವರಾತ್ರಿ ಪೂಜಾ ಕೈಂಕರ್ಯಗಳು, ಬುಧವಾರಶಿವರಾತ್ರಿ ಅಮಾವಾಸ್ಯೆ ವಿಶೇಷ ಉತ್ಸವಾದಿಗಳುಮತ್ತು ಗುರುವಾರ ಬೆಳಗ್ಗೆ 8.10 ರಿಂದ 8.45ರವರೆಗೆ ಮಹಾರಥೋತ್ಸವ ಜರುಗಲಿದೆ. ಈ ರಥೋತ್ಸವಕ್ಕೆ ಜಿಲ್ಲಾಡಳಿತ ಸೀಮಿತ ಮಂದಿಗಷ್ಟೇ ಪಾಸ್ ವಿತರಿಸಿದ್ದು, ಭಕ್ತಾದಿಗಳಿಗೆ ನಿರ್ಬಂಧ ಹೇರಿದೆ.
Related Articles
Advertisement
ಮಹದೇಶ್ವರ ಬೆಟ್ಟಕ್ಕೆ ನಿಖಿಲ್: ನಟ, ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯಾತ್ರೆ ಕೈಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದವೇಳೆಗೆ ಮಲೆ ಮಾದಪ್ಪನ ಹೆಬ್ಟಾಗಿಲುತಾಳಬೆಟ್ಟದವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ ಬಳಿಕ ಮಹದೇಶ್ವರನ ಸನ್ನಿಧಿಗೆ ಆಗಮಿಸುವರು.
ಮೈಸೂರು ಹಾಗೂ ಚಾ.ನಗರ ಜಿಲ್ಲೆಯಲ್ಲಿ ನಾಳೆಯಿಂದ ಮಹಾ ಶಿವರಾತ್ರಿ ಹಬ್ಬಆಚರಿಸಲಾಗುತ್ತಿದ್ದು, ವಿವಿಧ ಪುಣ್ಯಕ್ಷೇತ್ರ ಹಾಗೂಹಲವು ದೇವಾಲಯಗಳಲ್ಲಿ ವಿಶಿಷ್ಟ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ರಥೋತ್ಸವಗಳು ಜರುಗಲಿವೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ದಕ್ಷಿಣ ಕಾಶಿ ಖ್ಯಾತಿ ನಂಜನಗೂಡು ಶ್ರೀಕಂಠೇಶ್ವರ ದೇಗುಲ ಸನ್ನಿಧಿಯಲ್ಲಿ ಅಹೋರಾತ್ರಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶಿವನಾಮ ಸ್ಮರಣೆಗೆ ಸಹಸ್ರಾರು ಭಕ್ತರು ಬರುತ್ತಿದ್ದಾರೆ. ಇನ್ನು ಅರಮನೆ ಆವರಣದಲ್ಲಿ ತ್ರಿನೇಶ್ವಸ್ವಾಮಿಗೆ ಚಿನ್ನದ ಕೊಳಗ(ಮುಖವಾಡ) ಧರಿಸಿ, ವಿಶೇಷ ಪೂಜಾ ಕೈಂಕರ್ಯ ನಡೆಸಲಾಗುವುದು. ಕೆ.ಆರ್.ನಗರ ತಾಲೂಕಿನ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ದೇಗುಲದಲ್ಲಿ ರಥೋತ್ಸವ ನಡೆಯಲಿದೆ. ಜೊತೆಗೆಪುರಾತನ ಪ್ರಸಿದ್ಧ ಚಪ್ಪಡಿ ಕ್ಷೇತ್ರದಲ್ಲಿ ಶಿವರಾತ್ರಿಯಿಂದಯುಗಾದಿ ತನಕ ಒಂದು ತಿಂಗಳ ಕಾಲ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಆಗಮಿಸುತ್ತಿರುವ ಭಕ್ತರು :
ಶಿವರಾತ್ರಿ ವಿಶೇಷ ಪೂಜಾ ಸಂದರ್ಭದಲ್ಲಿ ಮಲೆ ಮಾದಪ್ಪನನ್ನು ಕಣ್ತುಂಬಿಕೊಳ್ಳಲು ರಾಮನಗರ, ಕನಕಪುರ, ಬೆಂಗಳೂರು ಗ್ರಾಮಾಂತರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತಾದಿಗಳು ಕಾವೇರಿ ವನ್ಯಜೀವಿ ವಲಯದ ಅರಣ್ಯದ ಮೂಲಕ ಕಾವೇರಿ ನದಿಯನ್ನು ದಾಟಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮೈಸೂರು, ಮಂಡ್ಯ, ಚಾ.ನಗರ ಜಿಲ್ಲೆಗಳ ಭಕ್ತಾದಿಗಳು ಕೊಳ್ಳೇಗಾಲ-ಹನೂರು- ಕೌದಳ್ಳಿ ಮಾರ್ಗವಾಗಿ ಶ್ರೀ ಕ್ಷೇತ್ರವನ್ನು ತಲುಪುತ್ತಿದ್ದಾರೆ. ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಊಟ, ಉಪಾಹಾರ, ನೀರು, ತಂಪಿ ಪಾನೀಯಗಳು, ಹಣ್ಣುಗಳು, ಮಜ್ಜಿಗೆ, ಪಾನಕ ವಿತರಣೆಣೆಗಾಗಿ ದಾನಿಗಳು ಅಲ್ಲಲ್ಲಿ ಬಿಡಾರ ಹೂಡಿ ಉಚಿತ ಸೇವೆಗಳನ್ನು ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ.
-ವಿನೋದ್ ಎನ್.ಗೌಡ