Advertisement

ಭೀಮಾ ನದಿಗೆ ನೀರು ಹರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ತಪ್ಪು ಮಾಹಿತಿ: ಸವದಿ

03:10 PM Oct 19, 2020 | keerthan |

ರಾಯಚೂರು: ಭೀಮಾ ನದಿಗೆ ಹರಿಸುವ ನೀರಿನ ಬಗ್ಗೆ ಮಹಾರಾಷ್ಟ್ರ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಎಂಟು ಲಕ್ಷ ಕ್ಯುಸೆಕ್ ಹರಿಸುವುದಾಗಿ ತಿಳಿಸಿ ಎರಡು ದಿನವಾದರೂ ನೀರು ಬಂದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ದೂರಿದರು.

Advertisement

ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಜ್ ಬಳಿ ಕೃಷ್ಣಾ ನದಿ ಪ್ರವಾಹ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಭೀಮಾ ನದಿಗೆ ಎಂಟು ಲಕ್ಷ ಕ್ಯೂಸೆಕ್ ನೀರು ಹರಿಸಿದ್ದಾಗಿ ಮಾಹಿತಿ ನೀಡಿದ್ದರಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಈಗ 3.50 ಲಕ್ಷ ಕ್ಯೂಸೆಕ್ ಮಾತ್ರ ಭೀಮಾ ನದಿಯಲ್ಲಿ ನೀರು ಹರಿಯುತ್ತಿದೆ. ಹಾಗಿದ್ದರೆ ಉಳಿದ ನೀರೆಲ್ಲಿಗೆ ಹೋಯ್ತು ಎಂದು ಪ್ರಶ್ನಿಸಿದರು.

ಈ ಬಗ್ಗೆ ಮಹಾರಾಷ್ಟ್ರ ನೀರಾವರಿ ಸಚಿವರೊದಿಗೆ ಮಾತುಕತೆಗೆ ನಡೆಸಿದ್ದೇನೆ. ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡದಿರಲು ತಿಳಿಸಲಾಗುವುದು ಎಂದರು.

ತಾಲೂಕಿನ ನಾಲ್ಕು ಗ್ರಾಮಗಳ ನೆರೆ ಸಿಲುಕುವ ಸಾಧ್ಯತೆ ಇದ್ದು, ಸ್ಥಳಾಂತರಕ್ಕೆ ಶೀಘ್ರ ಗ್ರಾಮಸಭೆ ನಡೆಸಲು ಸಹಾಯಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ.  ಗ್ರಾಮಸ್ಥರು ಬಯಸಿದ ಸ್ಥಳಕ್ಕೆ‌ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next