Advertisement

ಬೆಳಗಾವಿಗೆ ಸಚಿವರ ಭೇಟಿ; ಸಿಎಂ ಶಿಂಧೆಯದ್ದೇ ಅಂತಿಮ ನಿರ್ಧಾರ : ಫಡ್ನವಿಸ್

03:58 PM Dec 05, 2022 | Team Udayavani |

ಮುಂಬಯಿ : ಕರ್ನಾಟಕದೊಂದಿಗೆ ರಾಜ್ಯದ ಗಡಿ ವಿವಾದವನ್ನು ಸಮನ್ವಯಗೊಳಿಸಲು ನೇಮಕಗೊಂಡಿರುವ ಸಚಿವರು ವಿವಾದಿತ ಪ್ರದೇಶಗಳಿಗೆ ಭೇಟಿ ನೀಡಬೇಕೇ ಎಂಬುದರ ಕುರಿತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ಹೇಳಿದ್ದಾರೆ.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರು ಸಚಿವರನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಸ್ಥಳೀಯರು ಆಹ್ವಾನಿಸಿದ್ದರು. ವಿವಾದಿತ ಪ್ರದೇಶಗಳಿಗೆ ಅಂತಹ ಭೇಟಿಯನ್ನು ಏರ್ಪಡಿಸುವ ಮೂಲಕ ಯಾವುದೇ ಕಾನೂನು ತೊಡಕುಗಳನ್ನು ತಪ್ಪಿಸಬಹುದು ಎಂಬುದು ನಮ್ಮ ಅಭಿಪ್ರಾಯ. ಆದಾಗ್ಯೂ, ಸಚಿವರ ಭೇಟಿಯ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ. ಬೆಳಗಾವಿ, ಕಾರವಾರ ಮತ್ತು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿರುವ ಹಲವು ಗ್ರಾಮಗಳು ತಮ್ಮ ಆಡಳಿತದ ನಿಯಂತ್ರಣವನ್ನು ಯಾವ ರಾಜ್ಯಕ್ಕೆ ಪಡೆಯಬೇಕು ಎಂಬ ವಿವಾದದಲ್ಲಿದೆ. 1960 ರಲ್ಲಿ ಮಹಾರಾಷ್ಟ್ರದ ಆರಂಭದಿಂದಲೂ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂದರು.

ಸಮನ್ವಯ ಸಚಿವರಾಗಿ ನೇಮಕಗೊಂಡಿರುವ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಡಿಸೆಂಬರ್ 6 ರಂದು ಕರ್ನಾಟಕದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರನ್ನು ಭೇಟಿ ಮಾಡಿ ಗಡಿ ಸಮಸ್ಯೆಯ ಕುರಿತು ಮಾತುಕತೆ ನಡೆಸುವುದು ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next