Advertisement

MES ಪರ ಬೆಳಗಾವಿಯಲ್ಲಿ ಶಿಂಧೆ, ಫಡ್ನವೀಸ್ ಪ್ರಚಾರ ಮಾಡಲಿ: ರಾವುತ್ ಸವಾಲು

03:14 PM Apr 30, 2023 | Team Udayavani |

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಫಡ್ನವೀಸ್ ಅವರು ಬೆಳಗಾವಿಗೆ ತೆರಳಿ ಎಂಇಎಸ್ ಪರ ಪ್ರಚಾರ ಮಾಡಬೇಕು ಎಂದು ಮಾಜಿ ಸಚಿವ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್ “ನಾನು ಮಹಾರಾಷ್ಟ್ರ ಏಕೀಕರಣ ಸಮಿತಿ ಪರ ಮತ ಕೇಳಲು ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಿಗೆ ಹೋಗುತ್ತಿದ್ದೇನೆ. ಉಪಮುಖ್ಯಮಂತ್ರಿ ಫಡ್ನವೀಸ್ ಬೆಳಗಾವಿಗೆ ತೆರಳಿ ಎಂಇಎಸ್ ಪರ ಪ್ರಚಾರ ಮಾಡಬೇಕು. ಆದರೆ, ಪರಿಸ್ಥಿತಿ ವಿಭಿನ್ನವಾಗಿದೆ, ಎಂಇಎಸ್ ಸೋಲಿಸಲು ಅವರು ಬೆಳಗಾವಿಗೆ ಹೋಗಿದ್ದಾರೆ. ಬಿಜೆಪಿ ಮರಾಠಿ ಜನರನ್ನು ಸೋಲಿಸಲು ಹೋಗಿದ್ದಕ್ಕಾಗಿ ನಾಚಿಕೆಪಡಬೇಕು ” ಎಂದು ರಾವುತ್ ಹೇಳಿದ್ದಾರೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ಆಂದೋಲನದಲ್ಲಿ ತಾನು ಭಾಗವಹಿಸಿದ್ದೇನೆ ಎಂದು ಸಿಎಂ ಶಿಂಧೆ ಹೇಳಿಕೊಳ್ಳುತ್ತಾರೆ, ಅವರು ನಿಜವಾಗಿಯೂ ಹಾಗೆ ಮಾಡಿದ್ದರೆ ಅವರು ಎಂಇಎಸ್ ಮತ್ತು ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬೆಳಗಾವಿಯಲ್ಲಿರಬೇಕು ಎಂದರು.

ಕಳೆದ ವರ್ಷ ಜೂನ್‌ನಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿಂಧೆ ಅವರ ಶಿವಸೇನೆ ಆಡಳಿತ ಮಿತ್ರಪಕ್ಷಗಳಾಗಿವೆ. ಬೆಳಗಾವಿ-ಕಾರವಾರದ ಮರಾಠಿ ಮಾತನಾಡುವ ಜನರಿಗೆ ಶಿವಸೇನೆ (ಯುಬಿಟಿ) ಬದ್ಧವಾಗಿದೆ.  ಶಿವಸೇನೆಯ 69 ಕಾರ್ಯಕರ್ತರು ಹುತಾತ್ಮರಾಗಿದ್ದಾರೆ. ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಗಡಿ ವಿವಾದದಲ್ಲಿ ಮೂರು ತಿಂಗಳ ಕಾಲ ಜೈಲಿನಲ್ಲಿರಿಸಲಾಗಿತ್ತು ಎಂದು ರಾಜ್ಯಸಭಾ ಸಂಸದ ರಾವುತ್ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next