ಜಪಾನ್ : ಉತ್ತರ ಜಪಾನ್‌ನ ಅಮೊರಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ.
ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಭೂಕಂಪವು 20 ಕಿಲೋಮೀಟರ್ (12 ಮೈಲಿ) ಆಳದಲ್ಲಿ ಅಪ್ಪಳಿಸಿದೆ ಎಂದು ಹೇಳಿಕೊಂಡಿದೆ. ಅಲ್ಲದೆ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಭೂಕಂಪದ ತೀವ್ರತೆ 6.2 ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಜಪಾನಿನಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ, ಇದು ಆಗ್ನೇಯ ಏಷ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನದಾದ್ಯಂತ ವ್ಯಾಪಿಸಿರುವ ತೀವ್ರವಾದ ಭೂಕಂಪನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಷ್ಟುಮಾತ್ರವಲ್ಲದೆ ಇಲ್ಲಿನ ಕಟ್ಟಡಗಳು ಪ್ರಬಲವಾದ ಭೂಕಂಪಗಳನ್ನು ತಡೆದುಕೊಳ್ಳಬಲ್ಲವು ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ದೇಶವು ಕಟ್ಟುನಿಟ್ಟಾದ ನಿರ್ಮಾಣ ನಿಯಮಗಳನ್ನು ಹೊಂದಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಫಿಲಿಪೈನ್ಸ್ ನಲ್ಲಿ ಸಿಖ್ ದಂಪತಿಗಳ ಗುಂಡಿಕ್ಕಿ ಹತ್ಯೆ: ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ