Advertisement

ಅರುಣಾಚಲ ಪ್ರದೇಶದಲ್ಲಿ 3.8 ತೀವ್ರತೆಯ ಭೂಕಂಪನ: ಭೀತಿಯಿಂದ ಮನೆಯಿಂದ ಹೊರ ಓಡಿಬಂದ ಜನತೆ

04:51 PM Feb 19, 2023 | Team Udayavani |

ಅರುಣಾಚಲ ಪ್ರದೇಶ : ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿ ಭಾನುವಾರ ಮಧ್ಯಾಹ್ನ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.

Advertisement

ಭೂಕಂಪನದ ರಾಷ್ಟ್ರೀಯ ಕೇಂದ್ರದ ವರದಿಯು ಭೂಕಂಪವು ಮಧ್ಯಾಹ್ನ 12.12 ಕ್ಕೆ ಸಂಭವಿಸಿದ್ದು, ಭೂತಾನ್ ಗಡಿಯ ಸಮೀಪವಿರುವ ಪಶ್ಚಿಮ ಕಮೆಂಗ್‌ನಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ.

ಮಧ್ಯ-ಉತ್ತರ ಅಸ್ಸಾಂ ಮತ್ತು ಭೂತಾನ್‌ನ ಪೂರ್ವ ಭಾಗದಲ್ಲಿ ಕಂಪನದ ಅನುಭವವಾಗಿದೆ. ಯಾರಿಗೂ ಗಾಯ ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದಿಂದ ಇಡೀ ದೇಶವೇ ಭೀತಿಯಲ್ಲಿದ್ದು ಇದೀಗ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಜನ ಭೀತಿಗೊಳಗಾಗಿದ್ದರೆ.

ಇದನ್ನೂ ಓದಿ: ಭವಿಷ್ಯದ ಪೀಳಿಗೆಗಳು ಮೋದಿಯವರ “ಸುವರ್ಣ ಅವಧಿ” ಅಧ್ಯಯನ ಮಾಡುತ್ತಾರೆ: ಮಾಂಡವಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next