Advertisement
ಈ Magnite GEZA ಆವೃತ್ತಿಯಲ್ಲಿ ವಿಶೇಷವಾದ ಪ್ರೀಮಿಯಂ ಆಡಿಯೋ ಮತ್ತು ಇನ್ಫೋಟೈನ್ಮೆಂಟ್ ಅನುಭವವನ್ನು ಪಡೆಯಬಹುದಾಗಿದೆ.
- ಹೈರೆಸಲೂಶನ್ ನ 22.86 ಸೆಂ.ಮೀ ಅಳತೆಯ ಟಚ್ ಸ್ಕ್ರೀನ್
- ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಆ್ಯಂಡ್ರಾಯ್ಡ್ ಕಾರ್ ಪ್ಲೇ
- ಪ್ರೀಮಿಯಂ ಜೆಬಿಎಲ್ ಸ್ಪೀಕರ್ ಗಳು
- ಟ್ರಾಜೆಕ್ಟರಿ ರಿಯರ್ ಕ್ಯಾಮೆರಾ
- ಆ್ಯಪ್-ಆಧಾರಿತ ಕಂಟ್ರೋಲ್ಸ್ ನೊಂದಿಗೆ ಆಂಬಿಯೆಂಟ್ ಲೈಟಿಂಗ್
- ಶಾರ್ಕ್ ಫಿನ್ ಆಂಟೆನಾ
- ಪ್ರೀಮಿಯಂ ಬ್ಯಾಗಿ ಕಲರ್ ಸೀಟ್ ಅಪ್ ಹೋಲ್ಸ್ ಟೆರಿ
Related Articles
Advertisement
ಗ್ಲೋಬಲ್ ಎನ್ ಸಿಎಪಿ ನೀಡುವ ಅಡಲ್ಟ್ ಆಕ್ಯುಪೆಂಟ್ ಸೇಫ್ಟಿಯಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿರುವ ನಿಸಾನ್ ಮ್ಯಾಗ್ನೈಟ್ ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಸುರಕ್ಷತಾ ಗುಣಮಟ್ಟಗಳನ್ನು ಹೊಂದಿರುವ ವಾಹನ ಎನಿಸಿದೆ. ಇತ್ತೀಚೆಗೆ ನಿಸಾನ್ ತನ್ನ ಮ್ಯಾಗ್ನೈಟ್ ನ ಎಲ್ಲಾ ಶ್ರೇಣಿಯ ವಾಹನಗಳಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ಇದಲ್ಲದೇ, ಬಿಎಸ್6 ಹಂತ 2 ನ್ನು ಪರಿಚಯಿಸಿದ್ದು, ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
B-SUV ವಿಭಾಗದಲ್ಲಿ ಭಾರತದ ಅತ್ಯಂತ ನೆಚ್ಚಿನ ಆಯ್ಕೆಯ ವಾಹನವಾಗಿ ಮ್ಯಾಗ್ನೈಟ್ ಹೊರಹೊಮ್ಮಿದೆ. ಈ ಮಾದರಿಯ ವಾಹನವನ್ನು ಡಿಸೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದನ್ನು ಜಪಾನ್ ನಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ನಿಸಾನ್ ಮೋಟರ್ ಇಂಡಿಯಾದ ಉತ್ಪಾದನಾ ತತ್ತ್ವವಾದ `ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅನ್ನು ಅನುಸರಿಸಲಾಗುತ್ತಿದೆ.
ನಿಸಾನ್ ಮ್ಯಾಗ್ನೈಟ್ ಪ್ರಸ್ತುತ 15 ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಇತ್ತೀಚೆಗೆ ಸಿಯಾಚೆಲ್ಸ್, ಬಾಂಗ್ಲಾದೇಶ, ಉಗಾಂಡ ಮತ್ತು ಬ್ರುನೈನಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ನಿಸಾನ್ ಮೋಟರ್ ಇಂಡಿಯಾ ತನ್ನ ಪ್ರಾಥಮಿಕ ರಫ್ತು ಮಾರುಕಟ್ಟೆಯನ್ನು ಯೂರೋಪ್ ನಿಂದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್, ಕತಾರ್, ಬಹ್ರೇನ್ ಮತ್ತು ಕುವೈತ್ ನಂತಹ ದೇಶಗಳನ್ನೊಳಗೊಂಡ ಮಧ್ಯ ಪ್ರಾಚ್ಯಕ್ಕೂ ವಿಸ್ತರಣೆ ಮಾಡಿದೆ.