Advertisement

ಮ್ಯಾಗ್ನಿಫ್ಲೆಕ್ಸ್ ನ ನೂತನ ಪರಿಸರ ಸ್ನೇಹಿ ತಂತ್ರಜ್ಞಾನದ ಉತ್ಪನ್ನ ಮ್ಯಾಗ್ನಿಜಿಯೊ

05:48 PM Jun 06, 2024 | |

ಬೆಂಗಳೂರು: ವಿಶ್ವ ಪರಿಸರ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಐಷಾರಾಮಿ ಮ್ಯಾಟ್ರೆಸ್ ಬ್ರಾಂಡ್ ಮ್ಯಾಗ್ನಿಫ್ಲೆಕ್ಸ್, ಜನರ ಸುಖದಾಯಕ ನಿದ್ರೆಗಾಗಿ ನೂತನ ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ ಹೊಸ ಉತ್ಪನ್ನವನ್ನು ಪರಿಚಯಿಸಿದೆ. ಪರಿಸರ ಸುಸ್ಥಿರತೆಗೆ ಆದ್ಯತೆ ನೀಡುವ ಜೊತೆಗೆ ಆರಾಮದಾಯಕ ಭಾವನೆ ನೀಡುವ ಮ್ಯಾಗ್ನಿಜಿಯೊ ಹಾಸಿಗೆಗಳನ್ನು ಬಿಡುಗಡೆ ಮಾಡಿದೆ.

Advertisement

ಪ್ರತಿ ಮ್ಯಾಗ್ನಿಜಿಯೊ ಖರೀದಿಗೆ, ತನ್ನ ಗ್ರಾಹಕರ ಪರವಾಗಿ ಮ್ಯಾಗ್ನಿಫ್ಲೆಕ್ಸ್ ಕಂಪನಿಯೇ ಒಂದು ಸಸಿ ನೆಡಲು ಪ್ರತಿಜ್ಞೆ ಮಾಡಿದ್ದು, ಗ್ರಾಹಕರ ಹೆಸರಿನಲ್ಲಿ ಅಥವಾ ಅವರ ನಾಮಿನಿ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡುತ್ತದೆ.

ತಮ್ಮ ಹೊಸ ಉತ್ಪನ್ನವಾದ ಮ್ಯಾಗ್ನಿಜಿಯೊ ಕುರಿತು ಪ್ರತಿಕ್ರಿಯಿಸಿದ ಮ್ಯಾಗ್ನಿಫ್ಲೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ್ ನಿಚಾನಿ, “ಹವಾಮಾನ ಬದಲಾವಣೆಯೆಂಬ ಅಪಾಯಕಾರಿ ಸ್ಥಿತಿಯು ಎಲ್ಲೋ ದೂರದಲ್ಲಿಲ್ಲ, ಇದು ವಾಸ್ತವವಾಗಿದೆ. ಇದು ನಮ್ಮ ಆಯ್ಕೆಗಳನ್ನು ಮರುಪರಿಶೀಲಿಸಲು ಮತ್ತು ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ. ಈ ಜಾಗೃತಿಯು ಗ್ರಾಹಕರ ನಡವಳಿಕೆಯಲ್ಲಿ ಬದಲಾವಣೆಗೆ ಕಾರಣವಾಗಿದೆ. ಹೀಗಾಗಿಯೇ ಜನರು ತಮ್ಮ ಪರಿಸರ ಪ್ರಜ್ಞೆಯ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಉತ್ಪನ್ನಗಳನ್ನೇ ಸಕ್ರಿಯವಾಗಿ ಹುಡುಕುತ್ತಿದ್ದಾರೆ. ಗ್ರಾಹಕರಿಗೆ ಆರಾಮದಾಯಕ ಭಾವನೆ ನೀಡುವುದು ಮಾತ್ರವಲ್ಲದೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಸಹ ಪೂರೈಸುವ ಉತ್ಪನ್ನದೊಂದಿಗೆ ನಾವು ಬಂದಿದ್ದೇವೆ. ಹೆಚ್ಚೆಚ್ಚು ಸುಸ್ಥಿರ ಭವಿಷ್ಯಕ್ಕಾಗಿ ವಿಶ್ವಸಂಸ್ಥೆ ಸ್ಥಾಪಿಸಿದ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಷ್ಠಾನಗೊಳಿಸಲು ನಾವು ಮನಸ್ಸು ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಸುಸ್ಥಿರ ಭವಿಷ್ಯವನ್ನು ರೂಪಿಸಲು ಮ್ಯಾಗ್ನಿಜಿಯೊ ಕೊಡುಗೆ ನೀಡಲಿದೆ” ಎಂದು ಹೇಳಿದ್ದಾರೆ.

ಮ್ಯಾಗ್ನಿಜಿಯೊ ಹಾಸಿಗೆಗಳನ್ನು ರಿಜನರೇಟ್ ಮಾಡಿದ ಫೋಮ್ಗಳಿಂದ ರಚಿಸಲಾಗಿದ್ದು, ಇದು ಹಾನಿಕಾರಕ ಎಕ್ಸ್ಪ್ಯಾಂಡಿಂಗ್ ಏಜೆಂಟ್ಗಳಿಂದ ಮುಕ್ತವಾಗಿದೆ. ಈ ಫೋಮ್ ಗಳು ಬೆನ್ನುಮೂಳೆಯ ಜೋಡಣೆಗೆ ಅಗತ್ಯ ಬೆಂಬಲವನ್ನು ನೀಡಿದರೆ, ಮೆಮೊಫಾರ್ಮ್ ಪ್ಯಾಡಿಂಗ್ (Memoform padding) ದೇಹದ ಆಕಾರಕ್ಕೆ ಹೊಂದಿಕೆಯಾಗುವಂತೆ ನೋಡಿಕೊಳ್ಳುತ್ತದೆ. ಬ್ರೀದಬಲ್ ಫೈಬರ್ಗಳು ಆರಾಮದಾಯಕ ಭಾವನೆಯನ್ನು ಹೆಚ್ಚಿಸಿದರೆ, ‘ನೋ ವೇಸ್ಟ್’ ಫ್ಯಾಬ್ರಿಕ್ ಮೃದುವಾದ ಸ್ಪರ್ಶವನ್ನು ನೀಡುತ್ತದೆ.

ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಮ್ಯಾಗ್ನಿಜಿಯೊಗೆ ಇರುವ ಬದ್ಧತೆಯನ್ನು ಅದರ OEKO-TEX Standard 100 ಮತ್ತು OEKO-TEX STEP ಪ್ರಮಾಣೀಕರಣಗಳು ಒತ್ತಿಹೇಳುತ್ತವೆ. ಇದು ಮ್ಯಾಗ್ನಿಜಿಯೊ ಉತ್ಪನ್ನಗಳಲ್ಲಿ ಹಾನಿಕಾರಕ ಪದಾರ್ಥಗಳು ಇಲ್ಲದಿರುವುದನ್ನು ಹಾಗೂ ಜವಾಬ್ದಾರಿಯುತ ಉತ್ಪಾದನಾ ಪ್ರಕ್ರಿಯೆಯನ್ನು ಅನುಸರಿಸಿರುವುದನ್ನು ಖಾತರಿಪಡಿಸುತ್ತದೆ. ಇದಲ್ಲದೆ, ಕಂಪನಿಯ ನೂತನ ವ್ಯಾಕ್ಯೂಮ್ ಪ್ಯಾಕೇಜಿಂಗ್ ತಂತ್ರಜ್ಞಾನವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಮ್ಯಾಗ್ನಿಜಿಯೊ ಹಾಸಿಗೆಗಳು ಕನಿಷ್ಠ 10 ವರ್ಷಗಳ ಕಾಲ ಬಾಳಿಕೆ ಬರಲಿದ್ದು, ಸಂಪನ್ಮೂಲ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ ಎಂಬುದನ್ನು ಕಂಪನಿಯು ಖಚಿತಪಡಿಸುತ್ತದೆ.

Advertisement

ಮ್ಯಾಗ್ನಿಜಿಯೊ ಹಾಸಿಗೆಗಳು ಮ್ಯಾಗ್ನಿಫ್ಲೆಕ್ಸ್ ಸ್ಟೋರ್ಗಳಲ್ಲಿ ಮತ್ತು ಅದರ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ತುಂಬಾ ಕಂಫರ್ಟ್ ಆಗಿರುವ ಮ್ಯಾಗ್ನಿಜಿಯೊ ಹಾಸಿಗೆಗಳನ್ನು ಖರೀದಿಸಲು ಗ್ರಾಹಕರು ಮ್ಯಾಗ್ನಿಫ್ಲೆಕ್ಸ್ ಹೂಡಿಕೆ ಯೋಜನೆ (Magniflex Investment Plan- MIP) ಯ ಲಾಭವನ್ನು ಪಡೆಯಬಹುದು. ಈ ಯೋಜನೆಯು ಸುಲಭ ಇಎಮ್ಐ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next