ಬೇಕಾಗುವ ವಸ್ತು: ಒಂದು ಸಣ್ಣ ನಾಣ್ಯ (ಹೊಸ 1. ರೂ. ನಾಣ್ಯ), 2 ದೊಡ್ಡ ನಾಣ್ಯಗಳು (ಹಳೆ 2 ರೂ. ನಾಣ್ಯ)
Advertisement
ಪ್ರದರ್ಶನ: ಜಾದೂಗಾರನ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯೆ ಒಂದು ನಾಣ್ಯ ಇರುತ್ತದೆ. ಆತ ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ತನ್ನ ಮಂತ್ರದಂಡವನ್ನು ನಾಣ್ಯದ ಸುತ್ತ ತಿರುಗಿಸಿ, ಇನ್ನೊಂದು ಕೈನ ಹೆಬ್ಬೆರಳನ್ನು ಹತ್ತಿರ ತೆಗೆದುಕೊಂಡು ಬಂದು, ಕೈ ಬಿಡಿಸುತ್ತಾನೆ. ಏನಾಶ್ಚರ್ಯ! ಜಾದೂಗಾರನ ಅಂಗೈಯಲ್ಲಿ ಎರಡು ನಾಣ್ಯಗಳಿವೆ.
ಮೊದಲು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯೆ ಎರಡು ದೊಡ್ಡ ನಾಣ್ಯಗಳನ್ನು ಅಡ್ಡವಾಗಿ (ಮಲಗಿಸಿ) ಹಿಡಿದುಕೊಳ್ಳಿ. ಆ ನಾಣ್ಯಗಳು ನೋಡುಗರಿಗೆ ಕಾಣಿಸದಂತೆ ಸಣ್ಣ ನಾಣ್ಯವನ್ನು ಉದ್ದಕ್ಕೆ ಹಿಡಿಯಿರಿ. ಪ್ರೇಕ್ಷಕರಿಗೆ ಸಣ್ಣ ನಾಣ್ಯ ಮಾತ್ರ ಕಾಣಿಸುತ್ತಿರುತ್ತಿದೆ. ನಂತರ ಮಂತ್ರದಂಡ ಹಿಡಿದು ಮ್ಯಾಜಿಕ್ ಮಾಡುವವರಂತೆ ನಟಿಸುತ್ತಾ, ನಿಧಾನಕ್ಕೆ ಇನ್ನೊಂದು ಕೈನ ಹೆಬ್ಬೆರಳಿನಿಂದ ಸಣ್ಣ ನಾಣ್ಯವನ್ನು ಅಂಗೈಗೆ ತಳ್ಳಿ, ಎರಡು ನಾಣ್ಯಗಳನ್ನು ಜನರಿಗೆ ಕಾಣಿಸುವಂತೆ ಮಾಡಿ. ಪ್ರಯೋಗಕ್ಕೂ ಮುನ್ನ, ಕನ್ನಡಿಯ ಮುಂದೆ ನಿಂತು ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡಿ. ಕೈ ಚಳಕದಲ್ಲಿ ಚೂರೇ ಚೂರು ಮಿಸ್ ಆದರೂ ಗುಟ್ಟು ರಟ್ಟಾಗಿ ಬಿಡುತ್ತದೆ.