Advertisement

ದುಬಾರಿಯಾಯಿತು ಮ್ಯಾಗಿ,ಬ್ರೂ, ನೆಸ್‌ಕೆಫೆ! ಬೆಲೆ ಏರಿಸಿದ ನೆಸ್ಲೆ , ಹಿಂದೂಸ್ತಾನ್ ಯೂನಿಲಿವರ್

07:18 PM Mar 15, 2022 | Team Udayavani |

ನವದೆಹಲಿ: ನೆಸ್ಲೆ ಮತ್ತು ಹಿಂದೂಸ್ಥಾನ್‌ ಯುನಿಲಿವರ್‌ ಲಿ.(ಎಚ್‌ಯುಎಲ್‌) ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡಿವೆ.

Advertisement

ಆ ಹಿನ್ನೆಲೆ ಮ್ಯಾಗಿ, ಟೀ ಪುಡಿ ಮತ್ತು ಕಾಫಿ ಪುಡಿಗಳ ಬೆಲೆ ಹೆಚ್ಚಳವಾಗಲಿದೆ. 70 ಗ್ರಾಂ ಮ್ಯಾಗಿ ಪ್ಯಾಕ್‌ ಬೆಲೆ 12 ರೂ.ನಿಂದ 14 ರೂ.ಗೆ, 140 ಗ್ರಾಂ ಪ್ಯಾಕ್‌ ಬೆಲೆ 3 ರೂ. ಏರಿಕೆಯಾಗಲಿದೆ. 96 ರೂ.ಗೆ ಸಿಗುತ್ತಿದ್ದ 560 ಗ್ರಾಂ ಪ್ಯಾಕ್‌ ಬೆಲೆ 105 ರೂ. ಆಗಲಿದೆ.

ಹಾಗೆಯೇ ನೆಸ್‌ಕೆಫೆ ಮತ್ತು ಬ್ರೂ ಕಾಫಿ ಪುಡಿಗಳ ಬೆಲೆ, ಎ ಪ್ಲಸ್‌ ಹಾಲಿನ ಬೆಲೆ ಮತ್ತು ತಾಜ್‌ ಮಹಲ್‌ ಚಹಾ ಪುಡಿ ಬೆಲೆಯಲ್ಲೂ ಏರಿಕೆಯಾಗಲಿದೆ.

ನೆಸ್‌ಕೆಫೆ ಒಂದು ಲೀಟರ್ ಎ+ ಹಾಲಿನ ಬೆಲೆಯನ್ನೂ ಹೆಚ್ಚಿಸಿದೆ. ಇದಕ್ಕೆ ಮೊದಲು 75 ರೂ. ಪಾವತಿಸಬೇಕಾಗಿತ್ತು. ಆದರೆ ಈಗ 78 ರೂ. ಪಾವತಿಸಬೇಕಾಗಿದೆ. ನೆಸ್‌ಕೆಫೆ ಕ್ಲಾಸಿಕ್ ಕಾಫಿ ಪೌಡರ್ ಬೆಲೆ ಶೇ.3-7ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ:ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು

Advertisement

ನೆಸ್‌ಕೆಫೆ ಯ 25 ಗ್ರಾಂ ಪ್ಯಾಕ್ ಈಗ 2.5% ರಷ್ಟು ದುಬಾರಿಯಾಗಿದೆ. ಇದಕ್ಕೆ 78 ರೂ. ಬದಲು ಈಗ 80 ರೂ. ಪಾವತಿಸಬೇಕಾಗುತ್ತದೆ. ಇದರೊಂದಿಗೆ 50 ಗ್ರಾಂ ನೆಸ್‌ಕೆಫೆ ಕ್ಲಾಸಿಕ್‌ಗೆ 145 ರೂ. ಬದಲಿಗೆ 150 ರೂ.ಏರಿಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next