Advertisement

ಕ್ಷಯ ಮುಕ್ತ ಸಮಾಜಕ್ಕಾಗಿ ಆಂದೋಲನ

03:40 PM Jul 18, 2019 | Naveen |

ಮಾಗಡಿ: ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕ್ಷಯ ರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಕಲಾ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ವಿಭಾಗದಿಂದ ನಡೆದ ಕ್ಷಯ ರೋಗ ಪತ್ತೆ ಆಂದೊಲನಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಜು.27ರ ವರೆಗೆ ಆಂದೋಲನ ನಡೆಯಲಿದೆ. ಒಟ್ಟು 56 ತಂಡಗಳಲ್ಲಿ 112 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಮನೆಗಳಿಗೆ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ, ರೋಗ ಪತ್ತೆಗೆ ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದರು.

ಮನೆ ಸದಸ್ಯರು ಸಹಕಾರ ನೀಡಿ: ಪ್ರತಿಯೊಂದು ವೈದ್ಯಕೀಯ ಸಿಬ್ಬಂದಿ ತಂಡವು ನಿತ್ಯ ಕನಿಷ್ಠ 30ರಿಂದ 50 ಮನೆಗಳಿಗೆ ಭೇಟಿ ನೀಡಲಿದ್ದಾರೆ. ಅವರಿಗೆ ಮನೆಯ ಸದಸ್ಯರು ಸಹಕಾರ ನೀಡಬೇಕು. ಯಾವುದೇ ಮುಜಗರವಿಲ್ಲದೆ ತಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯವಿಲ್ಲದ್ದರೆ ತಿಳಿಸಿ, ಸಂಪೂರ್ಣ ಮಾಹಿತಿ ನೀಡಬೇಕು. ಈ ಮೂಲಕ ತಮ್ಮ ಮನೆಯಲ್ಲಿ ಇರುವ ವ್ಯಕ್ತಿಯ ರೋಗವನ್ನು ಪತ್ತೆ ಹಚ್ಚಿ, ತಮಗೆ ಬೇಕಾದ ಅಗತ್ಯ ಸಲಹೆ, ಔಷಧವನ್ನು ಉಚಿತವಾಗಿ ನೀಡಲಿದ್ದೇವೆ ಎಂದು ತಿಳಿಸಿದರು.

ಕ್ಷಯ ರೋಗ ತಡೆ ಕ್ರಮ: ಎರಡು ವಾರಕ್ಕಿಂತ ಮೇಲ್ಪಟ್ಟು ಕೆಮ್ಮು, ಸಂಜೆಯ ವೇಳೆ ಜ್ವರ ಕಾಣಿಸಿಕೊಳ್ಳುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಕಫ‌ದ ಜೊತೆ ರಕ್ತ ಬೀಳುವುದು, ವಾಸಿಯಾಗದ ಕೆಮ್ಮು ಇವುಗಳು ಕ್ಷಯ ರೋಗದ ಪ್ರಮುಖ ಲಕ್ಷಣವಾಗಿದೆ. ರೋಗಿ ಕೆಮ್ಮಿದಾಗ ಹೊರ ಬರುವ ತುಂತರುಗಳಿಂದ ರೋಗಾಣುಗಳು ಆರೋಗ್ಯವಂತರ ಮೇಲೂ ಸೋಂಕು ಉಂಟಾಗಲಿದೆ. ಕ್ಷಯ ರೋಗ ತಡೆಗೆ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ವೈದ್ಯಕೀಯ ಸಿಬ್ಬಂದಿ ತಿಳಿಸಿಕೊಡಲಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಅವಶ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ರಾಕೇಶ್‌, ಡಾ.ಅನಿಲ್ ಕುಮಾರ್‌, ಆರೋಗ್ಯ ಇಲಾಖೆಯ ಅಧಿಕಾರಿ ರಂಗನಾಥ್‌, ರಾಜು, ತುಕಾರಾಂ, ರಾಜಣ್ಣ, ಶಿವಣ್ಣ, ಬಾಲರಾಜು, ಕುಮಾರ್‌, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next