Advertisement

ಜಮೀನು ವಿಚಾರವಾಗಿ ಗಲಾಟೆ ಅಣ್ಣನಿಂದಲೇ ತಮ್ಮನ ಕೊಲೆ

02:03 PM Jul 08, 2023 | Team Udayavani |

ಮಾಗಡಿ: ಜಮೀನು ವಿಚಾರವಾಗಿ ಸಹೋದರರ ನಡುವೆ ಗಲಾಟೆ ಉಂಟಾಗಿ ಅಣ್ಣನಿಂದ ತಮ್ಮ ಕೊಲೆಯಾಗಿರುವ ಘಟನೆ ಮಾಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲೂಕಿನ ನಸೆಪಾಳ್ಯದ ನಾಗರಾಜು(34) ಕೊಲೆಯಾದ ವ್ಯಕ್ತಿ ಎಂದು ಗುರುತಿಸ ಲಾಗಿದೆ. ಶುಕ್ರವಾರ ಬೆಳಗ್ಗೆ ಕೊಂಡಳ್ಳಿ ದಾರಿಯ ಶೆಟ್ಟರಕಟ್ಟೆ ಬಳಿ ಇರುವ ಜಮೀನಿನಲ್ಲಿ ರೇಷ್ಮೆ ಸೊಪ್ಪು ಕೀಳುವ ಸಮಯದಲ್ಲಿ ಸಹೋದರರಾದ ರಾಮಚಂದ್ರ ಹಾಗೂ ನಾಗರಾಜು ನಡುವೆ ಜಮೀನು ವಿಚಾರವಾಗಿ ಗಲಾಟೆ ಆರಂಭವಾಗಿದೆ ಗಲಾಟೆ, ವಿಕೋಪಕ್ಕೆ ಹೋಗಿ ಅಣ್ಣ ರಾಮ ಚಂದ್ರು ತಮ್ಮ ನಾಗರಾಜು ಇಬ್ಬರು ಮಾರಕಾಸ್ತ್ರ ಗಳಿಂದ ಹೊಡೆದಾಡಿದ್ದು, ಈ ವೇಳೆ ರಾಮಚಂದ್ರ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ನಾಗರಾಜು ಸಾವನ್ನಪ್ಪಿದ್ದಾನೆ. ಪದೇ ಪದೇ ಜಮೀನು ವಿಚಾರವಾಗಿ ಸಹೋ ದರರ ನಡುವೆ ಗಲಾಟೆ ನಡೆ ಯುತ್ತಿದ್ದು, ಶುಕ್ರವಾರ ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣ ನಿಂದಲೇ ತಮ್ಮ ಕೊಲೆಯಲ್ಲಿ ವಿವಾದದ ಗಲಾಟೆ ಅಂತ್ಯ ವಾಗಿದೆ.

ಸ್ಥಳೀಯರು ಮಾಹಿತಿ ಮೇರೆಗೆ ಸ್ಥಳಕ್ಕೆ ರಾಮ ನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಡಿವೈಎಸ್‌ಪಿ ಯು.ಡಿ. ಕೃಷ್ಣಕುಮಾರ್‌, ವೃತ್ತ ನಿರೀಕ್ಷಕರಾದ ಬಿ.ರವಿ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗರಾಜುಗೆ ಪತ್ನಿ ಅನುಷಾ, ತಾಯಿ ಅರಸಮ್ಮ ಇದ್ದಾರೆ. ರಾಮಚಂದ್ರ ಪೊಲೀಸರಿಗೆ ಶರಣಾಗಿದ್ದು, ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next