Advertisement

Magadi; ಮರ ಬಿದ್ದು ಗಂಭೀರ ಗಾಯಗೊಂಡ ಬಾಲಕಿ; ಗ್ರಾಮಸ್ಥರ ಪ್ರತಿಭಟನೆ

10:59 AM Sep 05, 2023 | Team Udayavani |

ರಾಮನಗರ; ಒಣಗಿದ ಮರವೂಂದು ಬಾಲಕಿಯ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೂಂಡಿರುವ ಘಟನೆ ಮಾಗಡಿ ತಾಲೂಕಿ‌ನ ಕುದೂರು ಹೋಬಳಿ ಲಕ್ಕೇನಹಳ್ಳಿ ಗೇಟ್ ಬಳಿ ಸಂಭವಿಸಿದೆ.

Advertisement

ಕುದೂರು ಹೋಬಳಿಯ ಲಕ್ಕೇನಹಳ್ಳಿ ನಿವಾಸಿ ಗಂಗಾಧರ್ ಪುತ್ರಿ ಪ್ರಗತಿ (14 ವ) ಗಂಭೀರ ಗಾಯಗೂಂಡವರು.

ಪ್ರತಿ ದಿನದಂತೆ ಪ್ರಗತಿ ಕುದೂರಿನ ಕರ್ನಾಟಕ ಪಬ್ಲಿಕ್ ಶಾಲೆಗೆ ತೆರಳುವಾಗ ಲಕ್ಕೇನಹಳ್ಳಿ ಗೇಟ್ ಬಳಿ ಬಂದಾಗ ಸಾಲುಮರದ ತಿಮ್ಮಕ್ಕ ಸಾಕಿ ಬೆಳೆಸಿದ ಆಲದಮರದ ಕೂಂಬೆ ಶಾಲಾ ಬಾಲಕಿ ಪ್ರಗತಿ ಎಂಬುವವರ ಮೇಲೆ ಬಿದ್ದ ಪರಿಣಾಮ ತಲೆ ಹಾಗೂ ಕುತ್ತಿಗೆ ಮತ್ತು ಸೂಂಟಕ್ಕೆ ತೀವ್ರ ಪೆಟ್ಟಾಗಿದೆ. ತಕ್ಷಣವೇ ಅಲ್ಲಿದ್ದ ಮಕ್ಕಳು ಹಾಗೂ ಗ್ರಾಮಸ್ಥರು ಕುದೂರಿನ ಅಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಭಾಗದಲ್ಲಿ ಸಾಲುಮರದ ತಿಮ್ಮಕ್ಕ ಹಾಕಿ ಬೆಳೆಸಿದ ಸುಮಾರು ಮರಗಳು ಒಣಗಿ ನಿಂತಿದೆ. ಇನ್ನೆಷ್ಟು ಬಲಿಯಾಗಬೇಕು ಎಂದು ಗ್ರಾಮಸ್ಥರು ಪ್ರತಿಭಟಿಸಿದರು. ಒಣಗಿದ ಕೂಂಬೆಗಳನ್ನು ಕಡಿಯಿರಿ ಎಂದು ಸುಮಾರು ಬಾರಿ ತಿಳಿಸಿದ್ದೆವು. ಪಂಚಾಯಿತಿಯಲ್ಲಿಯೂ ಸಹ ರೆಜಲ್ಯೂಷನ್ ಮಾಡಿದ್ದೆವು. ಆದರೆ ತಿಮ್ಮಕ್ಕನವರ ಹಿಂಬಾಲಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಡೆದು ಪ್ರಕರಣ ದಾಖಲಿಸುವುದಾಗಿ ಹೆಳುತ್ತಾರೆ. ಈ ರೀತಿ ಆದರೆ ಈ ಹುಡುಗಿಗೆ ಯಾರು ಜವಾಬ್ದಾರಿ? ಈ ಹುಡುಗಿಯ ಚಿಕಿತ್ಸೆಗೆ ಸಾಲುಮರದ ತಿಮ್ಮಕ್ಕನವರ ಹಿಂಬಾಲಕರು ಹಾಗೂ ಅರಣ್ಯ ಇಲಾಖೆಯೆ ನೇರ ಹೂಣೆಗಾರಿಕೆ ಹೂರಬೇಕಾಗುತ್ತದೆ ಎಂದು ಗ್ರಾ. ಪಂ.ಸದಸ್ಯ ಕಿರಣ್ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಅಕ್ರೂಶ ವ್ಯಕ್ತಪಡಿಸಿದರು. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೂಂಡು ಒಣಗಿದ ಮರಗಳ ಕೂಂಬೆಗಳನ್ನು ತೆರವುಗೂಳಿಸಬೇಕು ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next