Advertisement

ಹಾಲು-ನೀರು ಹಗರಣ ಸಿಬಿಐಗೆ ವಹಿಸಲು ಒತ್ತಡ

09:05 PM Jun 20, 2021 | Team Udayavani |

ಮಂಡ್ಯ: ಮನ್‌ಮುಲ್‌(ಮಂಡ್ಯ ಜಿಲ್ಲಾಹಾಲು ಒಕ್ಕೂಟ)ನಲ್ಲಿ ನಡೆದಿರುವ ಹಾಲು-ನೀರು ಮಿಶ್ರಿತ ಹಗರಣವನ್ನು ಸಿಬಿಐ ತನಿಖೆಗೆವಹಿಸಬೇಕು ಎಂಬ ಒತ್ತಡ ಹೆಚ್ಚಾಗಿದೆ.

Advertisement

ಸರ್ಕಾರ ಸಿಐಡಿ ತನಿಖೆಗೆ ವಹಿಸಿರುವುದರಿಂದ ಪ್ರಕರಣ ಹಳ್ಳ ಹಿಡಿಯಬಹುದು. ಸಿಐಡಿರಾಜ್ಯ ಸರ್ಕಾರದ ಅಧೀನದಲ್ಲಿರುವುದರಿಂದರಾಜಕೀಯ ಪ್ರಭಾವ ಬೀರುವ ಸಾಧ್ಯತೆ ಇದೆ.ಇದರಲ್ಲಿ ಅಧಿಕಾರಿಗಳು ಹಾಗೂ ಆಡಳಿತಮಂಡಳಿಯ ಕೆಲವರು ಶಾಮೀಲಾಗಿದ್ದು,ಆರೋಪಿಗಳು ರಾಜಕೀಯ ಪ್ರಭಾವ ಬೀರಬಹುದು ಎಂಬ ಚರ್ಚೆಗಳು ಜೋರಾಗಿದೆ.ಅಲ್ಲದೆ, ಈಗಾಗಲೇ ಮಂಡ್ಯ ಜಿಲ್ಲಾ ರೈತಹಿತರಕ್ಷಣಾ ಸಮಿತಿ, ಹಾಲು ಉತ್ಪಾದಕರ ಹೋರಾಟ ಸಮಿತಿ, ರೈತಸಂಘ, ಕೃಷಿ ಪ್ರಾಂತರೈತಸಂಘ, ಜನವಾದಿ ಸಂಘಟನೆ, ಸಂಸ್ಥಾಪಕಅಧ್ಯಕ್ಷರು, ಹಿರಿಯ ಸಹಕಾರಿ, ಮಾಜಿ ಅಧ್ಯಕ್ಷರು ಸೇರಿವಿವಿಧ ಸಂಘಟನೆಗಳಮುಖಂಡರುಸಿಬಿಐ ತನಿಖೆಗೆ ವಹಿಸಬೇಕು ಎಂದುಒತ್ತಾಯಿಸಿವೆ.

ಪ್ರಾಥಮಿಕ ತನಿಖೆ ನಡೆಸಿರುವ ಡಿವೈಎಸ್ಪಿನವೀನ್‌ಕುಮಾರ್‌ ನೇತೃತ್ವದ ತಂಡಕ್ಕೆ ಮನ್‌ಮುಲ್‌ನಲ್ಲಿ ನಡೆದಿರುವ ಅಕ್ರಮ, ತಪ್ಪು ಕಂಡುಬಂದಿದ್ದವು. ಈ ಬಗ್ಗೆ ಸ್ವತಃ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಡಾ.ಎಂ.ಅಶ್ವಿ‌ನಿ ಸುದ್ದಿಗೋಷ್ಠಿನಡೆಸಿ, ಮನ್‌ಮುಲ್‌ನಲ್ಲಿಯೇ ಸಾಕಷ್ಟುಲೋಪ ನಡೆದಿರುವ ಬಗ್ಗೆ ಮಾಹಿತಿ ಬಂದಿದೆಎಂದರು.ಮನ್‌ಮುಲ್‌ನಲ್ಲಿ ಅಳವಡಿಸಲಾಗಿರುವಸಿಸಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಅಲ್ಲದೆ, ಟ್ಯಾಂಕರ್‌ಗಳಿಗೆ ಜಿಪಿಎಸ್‌ಅಳವಡಿಸಲಾಗಿದ್ದರೂ, ಅದರ ದಾಖಲಾತಿಅವಧಿ ಕೇವಲ 7 ದಿನಕ್ಕೆ ಸೀಮಿತವಾಗಿದ್ದು, ತನಿಖೆಗೆ ಅಡಚಣೆ ಉಂಟಾಗಿದೆ. ಅಲ್ಲದೆ, ಪ್ರಕರಣದಲ್ಲಿ ಮನ್‌ಮುಲ್‌ ಅಧಿಕಾರಿ ಹಾಗೂ ಸಿಬ್ಬಂದಿಭಾಗಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.ಹಾಲು-ನೀರು ಟ್ಯಾಂಕರ್‌ ಮಾಫಿಯಾಕ್ಕೆರಹದಾರಿ ಕಲ್ಪಿಸಿದ್ದು ಸಮಯ ಪರಿಪಾಲನೆಇಲ್ಲದೆ ಮನ್‌ಮುಲ್‌ ಆಡಳಿತ ಹಾಗೂ ಅಧಿಕಾರಿಗಳ ನಿಸ್ಸೀಮ ನಿರ್ಲಕ್ಷ Âವಾಗಿದೆ. ಬಿಎಂಸಿಟ್ಯಾಂಕರ್‌ಗಳು ನಿಗದಿತ ಸಮಯಕ್ಕೆ ಬಾರದಿದ್ದರೂ ಈ ಬಗ್ಗೆ ಕನಿಷ್ಠ ವಿಚಾರಿಸುವ ಗೋಜಿಗೆಅಧಿಕಾರಿಗಳು ಹೋಗಿಲ್ಲದಿರುವುದು ಅನುಮಾನ ಹೆಚ್ಚುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next