ಎಚ್.ಶಿವರಾಜು
ಮಂಡ್ಯ: ಒಳಗೆ ಹೋದರೆ ಕಾಡಿಗೆ ಬಂದಂಥ ಅನುಭವ, ತಂಪಾದ ವಾತಾವರಣ, ಸುತ್ತಲೂ ನೆರಳು, ವಿಶ್ರಾಂತಿ ತಾಣ…ಇದು ಮಂಡ್ಯ ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಉದ್ಯಾನದ ದೃಶ್ಯ.ಹೌದು, ಮೊದಲು ನಟ ಅಂಬ ರೀ ಶ್‌ಉದ್ಯಾನವನ ಎಂದೇ ಖ್ಯಾತಿಯಾಗಿದ್ದಪಾರ್ಕ್ ನಂತರ ಹೊಸಳ್ಳಿ ಬೋರೇಗೌಡ ಎಂದು ಹಿರಿಯ ನಾಗರಿಕರು ನಾಮಕರಣ ಮಾಡಿ, ನಂತರ ನಗರಸಭೆಯಲ್ಲೂ ಅನುಮೋದನೆಗೊಂಡಿದೆ.
ಅದನ್ನು ಹಿರಿಯನಾಗರಿಕರು ಸಮಿತಿ ರಚಿಸಿಕೊಂಡು ಉತ್ತಮಉದ್ಯಾನವನ್ನಾಗಿ ರೂಪಿಸುವ ಮೂಲಕ ಮಾದರಿಯಾಗಿದ್ದಾರೆ.ಅಭಿವೃದ್ಧಿ ಸಮಿತಿ ರಚನೆ: ಬೋರೇಗೌಡಪಾರ್ಕ್‌ನ ಹಿರಿಯ ನಾಗರಿಕರ ಅಭಿವೃದ್ಧಿಸಮಿತಿ ರಚಿಸಿಕೊಂಡಿರುವ ಹಿರಿಯ ನಾಗ ರಿಕರು ಉದ್ಯಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಸಮಿತಿಯಲ್ಲಿ ಒಟ್ಟು 140ಕ್ಕೂ ಹೆಚ್ಚು ಮಂದಿ ಕೈಜೋಡಿಸಿದ್ದಾರೆ.
ಎಲ್ಲರೂ 100 ರೂ. ನಿಂದ500 ರೂ.ವರೆಗೆ ದೇಣಿಗೆ ಸಂಗ್ರಹಿಸಿಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ.ನಿತ್ಯ 150ಕ್ಕೂ ಹೆಚ್ಚು ಮಂದಿವಾಯುವಿಹಾರ: ಯಾವುದೇ ಸರ್ಕಾರಿಉದ್ಯಾನಕ್ಕೂ ಕಡಿಮೆ ಇಲ್ಲದಂತೆಮರಗಿಡಗಳನ್ನು ಪೋಷಿಸುತ್ತಿದ್ದಾರೆ.ಇದರಿಂದ ಹೌಸಿಂಗ್ ಬೋರ್ಡ್‌ನಹಿರಿಯರು, ವಯಸ್ಸಾದವರು, ಯುವಕರು,ಯುವತಿ ಯರು, ಮಕ್ಕಳು, ರೋಗಿಗಳುಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿಬೆಳಗ್ಗೆ ಸಂಜೆ ವಾಯು ವಿಹಾರ ನಡೆಸಿ ವಿಶ್ರಾಂತಿಪಡೆಯುತ್ತಿದ್ದಾರೆ.ಔಷಧ ಸಸ್ಯ, ಮರಗಳು: ಈ ಉದ್ಯಾನದಲ್ಲಿಔಷಧ ಹಾಗೂ ವಿವಿಧ ರೀತಿಯ ಮರಗಳನ್ನುನೆಡಲಾಗಿದೆ.
ರಕ್ತದೊತ್ತಡ ಹಾಗೂಮಧುಮೇಹಕ್ಕೆ ಅನುಕೂಲವಾಗುವಮಧುನಾಶಿನಿ ಸಸ್ಯಗಳನ್ನು ಬೆಳೆಸಲಾಗಿದೆ.ಇದರ ಜತೆಗೆ ಆಯುರ್ವೇದ ಗಿಡಗಳು ಇವೆ.ಬಿಲ್ವಪತ್ರೆ, ಚಕ್ರಮುನಿ, ಆಡುಸೋಗೆ,ಮುಟ್ಟಿದರೆ ಮುನಿ, ಸಂಪಾರಿ, ಇನ್ಸುಲಿನ್,ಬೆಟ್ಟದನೆಲ್ಲಿ, ದೊಡ್ಡಪತ್ರೆ ಸೇರಿದಂತೆ ವಿವಿಧಸಸ್ಯ ಗಿಡಗಳಿವೆ. ಅದರ ಜತೆಗೆ ತೇಗ, ಹೊಂಗೆ,ಬೇವು, ಸಂಪಿಗೆ, ಅರಳೀಮರ, ಮಾವಿನಮರ ಸೇರಿದಂತೆ 150ಕ್ಕೂ ಹೆಚ್ಚುಮರಗಿಡಗಳನ್ನು ಬೆಳೆಸಲಾಗಿದೆ.ಸ್ವತ್ಛತೆಗೆ ಆದ್ಯತೆ: ಉದ್ಯಾನಅಭಿವೃದ್ಧಿಗೆ ಶ್ರಮಿಸುತ್ತಿರುವಹಿರಿಯ ನಾಗ ರಿ ಕರುಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಬರುವವಾಯು ವಿಹಾರಿ ಗಳಿಗೆತೊಂ ದರೆಯಾಗ ಬಾರದು ಎಂಬ ಉದ್ದೇಶದಿಂದ ತಾವೇಸ್ವತ್ಛಗೊಳಿಸುವ ಕೆಲಸಮಾಡುತ್ತಾರೆ. ನಗರಸಭೆಯಿಂದಲೂ ಸ್ವತ್ಛತೆನಡೆಸಿದರೆ, ಪ್ರತಿನಿತ್ಯ ಕಸವನ್ನುಎಲ್ಲೆಂದರಲ್ಲಿ ಎಸೆಯದಂತೆಜಾಗೃತಿ ಮೂಡಿಸಲಾಗುತ್ತಿದೆ
ವಿದ್ಯುತ್ ಸೌಲಭ್ಯಕ್ಕೆ ಮನವಿ
ಉದ್ಯಾನದಲ್ಲಿ ಒಂದು ಹೈಮಾಸ್ಟ್‌ದೀಪ ಅಳವಡಿಸಲಾಗಿದೆ. ಆದರೆಅದು ಎತ್ತರದಲ್ಲಿರುವುದರಿಂದಮರಗಳ ಹೆಚ್ಚುಬೆಳೆದಿರುವುದರಿಂದ ಅದರ ಮೇಲೆಬೀಳುವುದರಿಂದ ಪಾರ್ಕ್‌ನಲ್ಲಿಕತ್ತಲು ಆವರಿಸುತ್ತದೆ. ಆದ್ದರಿಂದಉದ್ಯಾನದ ಸುತ್ತ ಅಲಂಕಾರಿಕ ವಿದ್ಯುತ್‌ದೀಪಗಳನ್ನು ಅಳವಡಿಸುವ ಅವಶ್ಯಕತೆ ಇದೆ.