ಮದ್ದೂರು: ತಾಲೂಕಿನ ಚಂದಹಳ್ಳಿದೊಡ್ಡಿ ಗ್ರಾಮದಲ್ಲಿಕಲ್ಲುಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಟ್ಟಿರುವಹಿನ್ನೆಲೆ ಪರಿಹಾರ ನೀಡುವಂತೆ ಒತ್ತಾಯಿಸಿ ಸ್ಥಳೀಯಗ್ರಾಮಸ್ಥರು ಡಿಬಿಎಲ್ ಕಂಪನಿ ವಿರುದ್ಧ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶಾಸಕ ಡಿ.ಸಿ. ತಮ್ಮಣ್ಣ ಅಧಿಕಾರಿಗಳೊಟ್ಟಿಗೆಭೇಟಿ ನೀಡಿ ಪರಿಶೀಲನೆ ನಡೆಸಿ ಚರ್ಚಿಸಿದರು.
ತಾಲೂಕಿನ ಚಂದಹಳ್ಳಿದೊಡ್ಡಿ ಗ್ರಾಮದಲ್ಲಿ ಕಳೆದಎರಡು ದಿನಗಳ ಹಿಂದೆ ಸ್ಥಳೀಯ ಸಾರ್ವಜನಿಕರುಹಾಗೂ ಚುನಾಯಿತ ಪ್ರತಿನಿಧಿಗಳು ಪರಿಹಾರ ವಿತರಿಸುವಂತೆ ನಡೆಸುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆನಿರ್ಲಕ್ಷ್ಯ ವಹಿಸಿರುವ ಕಂಪನಿ ವಿರುದ್ಧ ಘೋಷಣೆಕೂಗಿದರಲ್ಲದೇ ಕೂಡಲೇ ಪರಿಹಾರ ದೊರಕಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ದಿನ ನಿತ್ಯ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಮನೆ, ದೇವಾಲಯ, ಅಂಗನವಾಡಿ ಕಟ್ಟಡ ಇನ್ನಿತರೆ ಕಟ್ಟಡಗಳು ಬಿರುಕುಬಿಟ್ಟು ಬೀಳುವ ಪರಿಸ್ಥಿತಿಯಲ್ಲಿರುವ ಜತೆಗೆ ಸ್ಫೋಟಕವಸ್ತುಗಳನ್ನು ಸಿಡಿಸುವುದರಿಂದ ಜಮೀನುಗಳಲ್ಲಿ ಬೆಳೆಬೆಳೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಯದವಾತಾವರಣದಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಅಳಲು ತೋಡಿ ಕೊಂಡರು.
ಬಳಿಕ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ, ರಸ್ತೆಹಾಗೂ ಮನೆಗಳು ಬಿರುಕು ಬಿಟ್ಟಿರುವ ಬಗ್ಗೆ ಸಮರ್ಪಕಮಾಹಿತಿ ಕಲೆಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆಸೂಚಿಸಿದ್ದು, ಚಂದಹಳ್ಳಿದೊಡ್ಡಿ ಗ್ರಾಮದಿಂದ ಡಿ.ಹೊಸೂರು ವರೆಗೆ ರಸ್ತೆ ನಿರ್ಮಿಸಲು ಕಂಪನಿ ಅಧಿಕಾರಿಗಳಿಗೆ ತಿಳಿಸಿದ್ದು, ಬಿರುಕು ಬಿಟ್ಟಿರುವ ಮನೆಗಳಿಗೆ ಕೂಡಲೇಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ ಬಳಿಕಪ್ರತಿಭಟನೆ ಹಿಂಪಡೆದರು. ಈ ವೇಳೆ ಗ್ರಾಪಂ ಸದಸ್ಯರಾಮಕೃಷ್ಣ, ಮುಂಖಡರಾದ ಕುಮಾರ್ ಇದ್ದರು.