Advertisement

ಮದ್ವೆ ದಿಬ್ಬಣಕ್ಕೆ ಹಾಡು

11:37 AM May 02, 2017 | Team Udayavani |

ಬಿ.ಎನ್‌.ಆರ್‌ ಫಿಲಂಸ್‌ ಲಾಂಛನದಲ್ಲಿ ಬಾ.ನಾ.ರವಿ ಅವರು ನಿರ್ಮಿಸುತ್ತಿರುವ “ಮದ್ವೆ ದಿಬ್ಬಣ’ ಚಿತ್ರಕ್ಕಾಗಿ ಕಟ್ಟಿಕೆರೆ ಮಲ್ಲೇಶ್‌ ಅವರು ಬರೆದಿರುವ “ಎಲ್ಲಿಂದ ಬಂತಪ್ಪ ಈ ಪೀಸು’ ಎಂಬ ಹಾಡಿನ ಚಿತ್ರೀಕರಣ ಲಕ್ಷ್ಮೇಗೌಡನ ದೊಡ್ಡಿಯಲ್ಲಿ ನಡೆದಿದೆ. ಅಭಿಷೇಕ್‌, ಭೂಷಣ್‌, ಮಾಣಿಕ್ಯ ಒಡೆಯರ್‌, ಪ್ರಬಲ್‌, ಸಾಗರ್‌, ಆಲಿಶಾ ಅಭಿನಯಿಸಿದ ಈ ಹಾಡಿಗೆ ಸ್ಟಾರ್‌ ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. 

Advertisement

ಎಸ್‌.ಉಮೇಶ್‌ ನಿರ್ದೇಶನದ ಈ ಚಿತ್ರಕ್ಕೆ ಶೇಕಡ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಚಂದ್ರು ಬೆಳವಂಗಲ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತ ನೀಡಿದ್ದಾರೆ. ಶಿವರಾಜ್‌ ಕೆ.ಆರ್‌.ಪೇಟೆ, ಅಭಿಷೇಕ್‌, ಸೋನಾಲ್‌, ರವಿಕಿರಣ್‌, ಭೂಷಣ್‌, ಮಾಣಿಕ್ಯ ಒಡೆಯರ್‌, ಪ್ರಬಲ್‌, ಸಾಗರ್‌, ಆಲಿಶಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next