Advertisement

Election; ಮುಂದಕ್ಕೆ ಸಾಗಿ, ಹೋರಾಡಿ: ಚುನಾವಣೆಗೆ ಜೆಡಿಯು ಥೀಮ್‌ ಸಾಂಗ್‌

11:30 PM Apr 02, 2024 | Team Udayavani |

ಪಟ್ನಾ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯುನ  ಪ್ರಚಾರದ ಥೀಮ್‌ ಹಾಡನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.

Advertisement

ಬಿಹಾರಿ ಭಾಷೆಯಲ್ಲಿರುವ “ಬಡಾ ಬಡಾ ಹೋ, ಲಡಾ ಲಡಾ ಹೋ(ಮುಂದಕ್ಕೆ ಸಾಗಿ ಮತ್ತು ಹೋರಾಡಿ) ನಿತೀಶ್‌ ಕುಮಾರ್‌’ ಹಾಡನ್ನು ಪಟ್ನಾದ ಜೆಡಿಯು ಕಚೇರಿಯಲ್ಲಿ ಅನಾವರಣ ಗೊಳಿಸಲಾಯಿತು. ಈ ವೇಳೆ ಬಿಹಾರದ ಸಚಿವರಾದ ವಿಜಯ್‌ ಕುಮಾರ್‌ ಚೌಧರಿ, ಅಶೋಕ್‌ ಚೌಧರಿ, ರಾಜ್ಯಸಭಾ ಸದಸ್ಯರಾದ ಸಂಜಯ್‌ ಝಾ, ಅನೀಲ್‌ ಹೆಗ್ಡೆ ಸೇರಿದಂತೆ ಜೆಡಿಯು ಹಿರಿಯ ನಾಯಕರು ಉಪಸ್ಥಿತರಿದ್ದರು.

ಎನ್‌ಡಿಎ ಭಾಗವಾಗಿರುವ ಜೆಡಿಯು, ಬಿಹಾರದಲ್ಲಿ ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next