Advertisement

ಮಧುರೈನಲ್ಲಿ ಜಲ್ಲಿಕಟ್ಟು ವೀಕ್ಷಣೆಗೆ ಜನಸಾಗರ : 950 ಗೂಳಿಗಳು ಭಾಗಿ !

10:26 AM Feb 05, 2017 | |

ಮಧುರೈ : ಭಾರಿ ಪ್ರತಿಭಟನೆಗಳ ಬಳಿಕ ಸುಪ್ರೀಂ ಕೋರ್ಟ್‌ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿನ ಮೇಲೆ ವಿಧಿಸಿದ ನಿರ್ಬಂಧ ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅವನೀಪುರಂನಲ್ಲಿ  ಭಾನುವಾರ ಭರ್ಜರಿ ಜಲ್ಲಿಕಟ್ಟು ಕ್ರೀಡೆಯನ್ನು ಆಯೋಜಿಸಲಾಗಿದೆ.

Advertisement

ಸ್ಪರ್ಧೆಯಲ್ಲಿ  ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ 900ಕ್ಕೂ ಹೆಚ್ಚು  ಗೂಳಿಗಳು ಪಾಲ್ಗೊಂಡಿವೆ. ಎಲ್ಲಾ ಗೂಳಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಗೂಳಿ ಹಿಡಿಯುವ ರಿಗೆ ಸಮವಸ್ತ್ರಗಳನ್ನು ಕಡ್ಡಾಯಮಾಡಲಾಗಿದೆ.  

ಮುನ್ನೆಚ್ಚರಿಕಾ ಕ್ರಮಗಳ ಅಂಗವಾಗಿ 500 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಸ್ಥಳದಲ್ಲಿ ನಿಯೋಜಿಸಲಾಗಿದೆ. 20 ಅಂಬುಲೆನ್ಸ್‌ ಗಳನ್ನು ಸ್ಥಳದಲ್ಲಿರಿಸಲಾಗಿದೆ. ಸುತ್ತಮುತ್ತಲೂ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ.

ತಮಿಳುನಾಡಿನ ಕಂದಾಯ ಸಚಿವ ಆರ್‌.ಬಿ.ಉದಯ್‌ಕುಮಾರ್‌ ಅವರು ಉಪಸ್ಥಿತರಿದ್ದಾರೆ.ಸಾವಿರಾರು ಕ್ರೀಡಾಸಕ್ತರು ಜಮಾವಣೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next