Advertisement

“ಮಧುರ ಕನ್ನಡ’ಉದ್ಘಾಟನೆ

02:55 AM Jul 14, 2017 | Team Udayavani |

ಮೀಯಪದವು: ಸರ್ವಶಿûಾ ಅಭಿಯಾನ ಕಾಸರಗೋಡು ಜಿಲ್ಲಾ ನೇತೃತ್ವ ದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಿ ರೂಪುಗೊಂಡ “ಮಧುರ ಕನ್ನಡ’ ಎನ್ನುವ ರಾಜ್ಯಮಟ್ಟದ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ತೊಟ್ಟೆತ್ತೋಡಿಯ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಯಿತು.

Advertisement

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮಲೆಯಾಳ ಬೇಕು ಎಂಬ ಕಾರ್ಯಕ್ರಮವನ್ನು ಮಲೆಯಾಳಿ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಪ್ರಸ್ತುತ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷರಾದ ಎ.ಕೆ.ಎಂ.ಅಶ್ರಫ್‌ ಉದ್ಘಾಟಿಸುತ್ತಾ ಮಧುರ ಕನ್ನಡ ಎಂಬ ಶಬ್ದವೇ ಬಹಳ ಸೂಕ್ತವಾಗಿದೆ ಹಾಗೂ ನನ್ನ ಪ್ರಥಮ ಪ್ರಾಶಸ್ತÂ ಕನ್ನಡವಾಗಿದೆ ಎಂದರು. ಮೀಂಜ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶಂಶಾದ್‌ ಶುಕೂರ್‌ ಅಧ್ಯಕ್ಷತೆ ವಹಿಸಿದ್ದರು. ಸರ್ವಶಿûಾ ಅಭಿಯಾನದ ಜಿಲ್ಲಾ ಕೋರ್ಡಿನೇಟರ್‌ ವೇಣುಗೋಪಾಲ್‌, ಶಾಲಾ ವ್ಯವಸ್ಥಾಪಕರಾದ ಡಾ| ಟಿ.ಕೆ. ಜಯಪ್ರಕಾಶ ನಾರಾಯಣ ಶುಭ ಹಾರೈಸಿದರು. 

ಮಂಜೇಶ್ವರ ಬಿ.ಆರ್‌.ಸಿ.ಯ ಬಿ.ಪಿ.ಒ. ವಿಜಯಕುಮಾರ್‌ ಅವರು ಕಾರ್ಯ ಕ್ರಮದ ಮಹತ್ವವನ್ನು ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ. ಸದಾಶಿವ ರಾವ್‌ ಸ್ವಾಗತಿಸಿದರು. ಬಿ.ಆರ್‌.ಸಿ. ತರಬೇತು ದಾರರಾದ ಇಸ್ಮಾಯಿಲ್‌ ವಂದಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಬಿ.ಆರ್‌.ಸಿ. ತರಬೇತುದಾರರಾದ ಗುರುಪ್ರಸಾದ್‌ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕುಂಬಳೆ ಬಿ.ಆರ್‌.ಸಿ. ತರಬೇತುದಾರರಾದ ಶರತ್‌ ಕುಮಾರ್‌  ತರಬೇತಿಯ ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next