ಹೊಸದಿಲ್ಲಿ : “ಮದ್ರಸಗಳು ಭಯೋತ್ಪಾದಕರನ್ನು ಸೃಷ್ಟಿಸುತ್ತವೆಯೇ ಹೊರತು ವೈದ್ಯರು, ಇಂಜಿನಿಯರ್‌ಗಳನ್ನು ಅಲ್ಲ. ಆದುದರಿಂದ ಮದ್ರಸಗಳನ್ನು ಮುಖ್ಯ ವಾಹಿನಿ ಶಿಕ್ಷಣಕ್ಕೆ ತರಬೇಕು’ ಎಂದು ಶಿಯಾ ಕೇಂದ್ರ ವಕ್‌ಫ್ ಮಂಡಳಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ವಿನಂತಿಸಿದೆ.
“ದೇಶದಲ್ಲಿನ ಎಷ್ಟು ಮದ್ರಸಗಳು ವೈದ್ಯರು, ಇಂಜಿನಿಯರ್‌ಗಳು, ಐಎಎಸ್ ಅಧಿಕಾರಿಗಳನ್ನು ತಯಾರಿಸಿವೆ ? ಇಲ್ಲ; ಆದರೆ ಕೆಲವು ಮದ್ರಸಗಳು ಭಯೋತ್ಪಾದಕರನ್ನು ಸೃಷ್ಟಿಸಿವೆ’ ಎಂದು ಶಿಯಾ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪತ್ರದಲ್ಲಿ ಹೇಳಿದ್ದಾರೆ.
“ಮದ್ರಸಗಳನ್ನು ಸಿಬಿಎಸ್‌ಇ, ಐಸಿಎಸ್‌ಇ ಜತೆಗೆ ಸಂಯೋಜಿಸಬೇಕು; ಮತ್ತು ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ಐಚ್ಛಿಕ ವಾಗಿ ಮಾಡಬೇಕು’ ಎಂದು ರಿಜ್ವಿ ಆಗ್ರಹಿಸಿದ್ದಾರೆ.
ಅನೇಕ ಮದ್ರಸಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೆರವಾಗುವುದಕ್ಕೆ ಬಳಸಲಾಗುತ್ತಿದೆ ಎಂದು ರಿಜ್ವಿ ಹೇಳಿದ್ದಾರೆ.
Related Articles
“ನಾನು ಈ ಬಗ್ಗೆ ಪ್ರಧಾನಿ ಮೋದಿಗೆ ಉ.ಪ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಹೀಗೆ ಮಾಡಿದಲ್ಲಿ ನಮ್ಮ ದೇಶವು ಇನ್ನಷ್ಟು ಬಲಶಾಲಿ ಮತು ಸದೃಢವಾಗುತ್ತದೆ’ ಎಂದು ರಿಜ್ವಿ ಮಾಧ್ಯಮಕ್ಕೆ ತಿಳಿಸಿದರು.
ರಿಜ್ವಿ ಅವರ ಅಭಿಪ್ರಾಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಮಜ್‌ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು “ಶಿಯಾ ಮಂಡಳಿ ಅಧ್ಯಕ್ಷ ಓರ್ವ ಬಫೂನ್‌ಮತ್ತು ಸಮಯಸಾಧಕ’ ಎಂದು ಟೀಕಿಸಿದ್ದಾರೆ.