ಕಾಸರಗೋಡು : ಮಧೂರು ಗ್ರಾಮ ಪಂಚಾಯತ್‌ನ ಹಳೆಯ ಚೂರಿ (ಸೂರ್ಲು) ಇಶತೂಲ್ ಇಸ್ಲಾಂ ಮದ್ರಸದ ಅಧ್ಯಾಪಕ ರಿಯಾಸ್ ಮೌಲವಿ (30) ಅವರ ಬರ್ಬರ ಹತ್ಯೆಗೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಕಾಸರಗೋಡು ಕರಂದಕಾಡು ನಿವಾಸಿಗಳಾದ ನಿತಿನ್, ಅಖಿಲ್, ಅಜೇಶ್ ಅಲಿಯಾಸ್ ಅಪ್ಪು ಎಂದು ಗುರುತಿಸಲಾಗಿದೆ.
ಮಡಿಕೇರಿ ನಿವಾಸಿ ಯಾಗಿದ್ದ ರಿಯಾಸ್‌ರನ್ನು ಮಾ. 20 ಮಧ್ಯರಾತ್ರಿ ಕುತ್ತಿಗೆ ಕೊಯ್ದು, ಎದೆಗೆ ಇರಿದು ಕೊಲೆ ಮಾಡಲಾಗಿತ್ತು. ಘಟನೆಯನ್ನು ಖಂಡಿಸಿ ಕಾಸರಗೋಡು ವಿಧಾನಸಭಾ ವ್ಯಾಪ್ತಿಧಿಯಲ್ಲಿ ಮುಸ್ಲಿಂ ಲೀಗ್ ಕರೆ ನೀಡಿದ ಹರತಾಳದಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತಲ್ಲದೆ ವ್ಯಾಪಕ ಹಿಂಸಾಚಾರ ನಡೆದಿತ್ತು.
ಹಿಂಸಾನಿರತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಡೆಸಿ ದ್ದರು. ಹಿಂಸೆಯಲ್ಲಿ ಹಲವು ಮನೆಗಳು, ವಾಹನಗಳು ಹಾನಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದರು.
ಮೂವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದ್ದು ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.