Advertisement

ಮದ್ರಸಾ ಅಧ್ಯಾಪಕನಿಗೆ 53 ವರ್ಷ ಕಠಿಣ ಸಜೆ, ದಂಡ

08:20 PM Mar 31, 2023 | Team Udayavani |

ಕಾಸರಗೋಡು: ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ಬಂಟ್ವಾಳದ ವಿಟ್ಲ ಪಟ್ನೂರು ಗ್ರಾಮದ ಬದ್ರಕಡಂಬು ನಿವಾಸಿ ಅಬ್ದುಲ್‌ ಹನೀಫ್‌ ಮದನಿ (44) ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ) ಫೋಕ್ಸೋ ಕಾನೂನು ಹಾಗೂ ಇತರ ಸೆಕ್ಷನ್‌ನಡಿ ಒಟ್ಟು 53 ವರ್ಷ ಕಠಿನ ಸಜೆ ಮತ್ತು 3.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ದಂಡ ಪಾವತಿಸದಿದ್ದಲ್ಲಿ ಮೂರೂವರೆ ವರ್ಷ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. ಫೋಕ್ಸೋದ ಎರಡು ಸೆಕ್ಷನ್‌ಗಳಡಿ ನ್ಯಾಯಾಲಯ ತಲಾ 20 ವರ್ಷ ಸಜೆ, ಐಪಿಸಿಯ ಎರಡು ಸೆಕ್ಷನ್‌ಗಳಡಿ 13 ವರ್ಷ ಸಹಿತ ಒಟ್ಟು 53 ವರ್ಷ ಸಜೆ ವಿಧಿಸಿದೆ. ದಂಡದ ಹಣವನ್ನು ಇಬ್ಬರು ಬಾಲಕರಿಗೆ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಿದೆ.

ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2016 ರಲ್ಲಿ ಹಲವು ದಿನಗಳಲ್ಲಿ 10 ಮತ್ತು 11 ವರ್ಷದ ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ನೀಡಲಾದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದರು. ಇದೇ ರೀತಿಯ ಇನ್ನೊಂದು ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಈತನಿಗೆ ನ್ಯಾಯಾಲಯ 20 ವರ್ಷ ಸಜೆ ವಿಧಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next