Advertisement

ದಿನ ಪತ್ರಿಕೆಗಳ ನಿಲುಗಡೆಗೆ ಹೈಕೋರ್ಟ್‌ ನಕಾರ ; ಪತ್ರಿಕೆಗಳಿಂದ ಸೋಂಕು ಹರಡುವುದು ಸತ್ಯವಲ್ಲ

08:20 PM Apr 11, 2020 | Hari Prasad |

ಚೆನ್ನೈ: ದೇಶದೆಲ್ಲೆಡೆ ಜಾರಿಯಲ್ಲಿರುವ ಲಾಕ್‌ ಡೌನ್‌ ವ್ಯಾಪ್ತಿಯಿಂದ ದಿನಪತ್ರಿಕೆಗಳನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಮದ್ರಾಸ್‌ ಹೈಕೋರ್ಟ್‌ ತಿರಸ್ಕರಿಸಿದೆ. ದಿನಪತ್ರಿಕೆಗಳಿಂದ ಕೋವಿಡ್ ವೈರಸ್‌ ಹರಡುತ್ತದೆ ಎಂಬ ಅಸ್ಪಷ್ಟ ವಾದವನ್ನು ಮುಂದಿಟ್ಟುಕೊಂಡು ಜನರಿಗೆ ಮಾಹಿತಿ ಲಭ್ಯವಾಗುವ ಅವಕಾಶವನ್ನು ಮೊಟಕುಗೊಳಿಸಲು ಆಗದು ಎಂದು ನ್ಯಾಯಪೀಠ ಹೇಳಿದೆ.

Advertisement

ಅರ್ಜಿದಾರರು ತಮ್ಮ ವಾದಕ್ಕೆ ಪೂರಕವಾಗಿ, ‘ದ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್ ಮೆಡಿಸಿನ್‌’ ಎಂಬ ವೈಜ್ಞಾನಿಕ ಸಂಶೋಧನಾ ಬರಹಗಳ ಮಾಸಿಕದಲ್ಲಿ ಪ್ರಕಟವಾಗಿದ್ದ ಸಂಶೋಧನಾ ವರದಿಯೊಂದನ್ನು ಲಗತ್ತಿಸಿದ್ದರು.

ಪತ್ರಿಕೆ ಸರಬರಾಜು ಮಾಡುವ ಯಾವುದೇ ಒಬ್ಬ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಇದ್ದಲ್ಲಿ ಅದು ಓದುಗರಿಗೂ ತಲುಪುತ್ತದೆ ಎಂದು ವರದಿಯಲ್ಲಿರುವ ಅಂಶವನ್ನು ಪ್ರತಿಪಾದಿಸಿದ್ದರು. ಆದರೆ, ಅವರ ವಾದವನ್ನು ಅಲ್ಲಗಳೆದ ನ್ಯಾಯಪೀಠ, ‘ಈ ಸಂಶೋಧನಾ ವರದಿಗಳು ಪೂರ್ವಭಾವಿ ಅಧ್ಯಯನದ ಸ್ವರೂಪದಲ್ಲಿವೆ’ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next