Advertisement

ವಣ್ಣಿಯಾರ್‌ ಸಮುದಾಯದ ಶೇ. 10.5 ಮೀಸಲಾತಿ ರದ್ದು

07:21 PM Nov 01, 2021 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರ, ವಣ್ಣಿಯಾರ್‌ ಸಮುದಾಯಕ್ಕೆ ನೀಡಿದ್ದ ಶೇ. 10.5ರಷ್ಟು ಒಳ ಮೀಸಲಾತಿಯನ್ನು ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ರದ್ದುಗೊಳಿಸಿದೆ.

Advertisement

ಕರ್ನಾಟಕದಲ್ಲಿ ಕೆಲವು ಸಮುದಾಯಗಳಿಗೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸುವ ಆಗ್ರಹಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಾಗೂ ಚುನಾವಣೆಯಂಥ ಸಂದರ್ಭಗಳಲ್ಲಿ ಜನರ ಮನಸ್ಸು ಗೆಲ್ಲಲು ಒಳ ಮೀಸಲಾತಿ ಕಲ್ಪಿಸುವ ಬಗ್ಗೆ ಕೈಗೊಳ್ಳುವ ನಿರ್ಧಾರ ಕೈಗೊಳ್ಳುವ ರಾಜಕೀಯ ಪಕ್ಷಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಏನಿದು ಪ್ರಕರಣ?:

2021ರ ತಮಿಳುನಾಡು ಚುನಾವಣೆಗೆ ಅಧಿಸೂಚನೆ ಹೊರಬೀಳುವ ಕೆಲವೇ ಗಂಟೆಗಳ ಮುನ್ನ ಸರ್ಕಾರ ಈ ಮೀಸಲಾತಿ ನಿರ್ಧಾರ ಪ್ರಕಟಿಸಿತ್ತು. ಚುನಾವಣೆ ನಂತರ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರ ಇದನ್ನು ಜಾರಿಗೊಳಿಸಿತ್ತು. ಆದರೆ, ಆದೇಶದ ವಿರುದ್ಧ ಹಲವಾರು ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು. ಅತಿ ಹಿಂದುಳಿದ ಜಾತಿಗಳಿಗೆ (ಎಂಬಿಸಿ) ಶೇ. 20ರಷ್ಟು ಮೀಸಲಾತಿಯಿದೆ. ಇನ್ನು, ಎಂಬಿಸಿಗಳಲ್ಲಿ ವಣ್ಣಿಯಾರ್‌ ಸಮುದಾಯದವರ ಪ್ರಮಾಣ ಶೇ. 20ರಷ್ಟಿದೆ. ಇಷ್ಟು ಸಣ್ಣ ಸಮುದಾಯಕ್ಕೆ ಶೇ. 10.5ರಷ್ಟು ಮೀಸಲಾತಿ ನೀಡಿದರೆ, ಎಂಬಿಸಿಯ ಉಳಿದ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next