Advertisement

ಮಡಿಲು ಕಿಟ್‌ ಯೋಜನೆ ರದ್ದು

03:10 AM Jul 05, 2017 | Karthik A |

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬದ ಗರ್ಭಿಣಿಯರು ಸರಕಾರಿ ಅಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಾಗ ವಿತರಿಸುವ ಮಡಿಲು ಕಿಟ್‌ ಯೋಜನೆ ಅನುದಾನದ ಕೊರತೆಯಿಂದ ರದ್ದಾಗಿದೆ. ಮಡಿಲು ಯೋಜನೆಯಡಿ ಈ ವರ್ಷ ಕಿಟ್‌ ನೀಡಲು ಸಾಧ್ಯವಿಲ್ಲ. ರಾಜ್ಯ ಸರಕಾರ ಬಜೆಟ್‌ನಲ್ಲಿ  ಅನುದಾನ ಮೀಸಲಿಟ್ಟಿಲ್ಲ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ ನಿಂದಲೂ ಅನುದಾನ ಬಂದಿಲ್ಲ. ಹೀಗಾಗಿ ಯೋಜನೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ತಿಳಿಸಿದ್ದಾರೆ.

Advertisement

2007ರಿಂದ 2013ರ ವರೆಗೆ ಮಡಿಲು ಯೋಜನೆಯ ಕಿಟ್‌ಗೆ ರಾಜ್ಯ ಸರಕಾರ ಅನುದಾನ ನೀಡಿದೆ. 2013ರಿಂದ 2016ರವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಅನುದಾನ ಬಿಡುಗಡೆ ಮಾಡಿತ್ತು. ಈ ವರ್ಷ ರಾಜ್ಯ ಸರಕಾರ, ರಾಷ್ಟ್ರೀಯ ಆರೋಗ್ಯ ಮಿಷನ್‌ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಈ ಯೋಜನೆ ಸಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದಿದ್ದಾರೆ. 2017ರ ಮಾರ್ಚ್‌ ತನಕ ಮಡಿಲು ಕಿಟ್‌ ವಿತರಣೆ ಮಾಡಲಾಗಿದೆ. ಮಾರ್ಚ್‌ ಅನಂತರ 4 ಲಕ್ಷ ಕಿಟ್‌ನ ಆವಶ್ಯಕತೆ ಇದೆ ಎಂದು ಆರೋಗ್ಯ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಲಾಗಿದೆ. 

2017ರ ಬಜೆಟ್‌ನಲ್ಲಿ ಮಡಿಲು ಯೋಜನೆಗೆ ರಾಜ್ಯ ಸರಕಾರ ಹಣ ಮೀಸಲಿಟ್ಟಿಲ್ಲ. ರಾಷ್ಟ್ರೀಯ ಆರೋಗ್ಯ ಮಿಷನ್‌ ಕೂಡ ಅನುದಾನ ನೀಡಿರಲಿಲ್ಲ. ಹೀಗಾಗಿ, ರಾಜ್ಯ ಸರಕಾರ ಯೋಜನೆ ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಮಡಿಲು ಕಿಟ್‌ನಲ್ಲಿ ಬಾಣಂತಿ ಮತ್ತು ಮಗುವಿನ ಆರೈಕೆಗೆ ಬೇಕಾಗುವ ಫ್ಲೋರ್‌ ಮ್ಯಾಟ್‌, ಬೆಡ್‌ಶೀಟ್‌, ಟವೆಲ್‌, ಹೊಟ್ಟೆಗೆ ಸುತ್ತುವ ಬೆಲ್ಟ್,  ಕಾಟನ್‌ ಡೈಪರ್‌, ಸ್ಯಾನಿಟರಿ ನ್ಯಾಪ್‌ಕಿನ್ಸ್‌, ಎಣ್ಣೆ, ಸೋಪ್‌ ಸಹಿತ ಸುಮಾರು 18 ಉತ್ಪನ್ನಗಳು ಸೇರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next