Advertisement
ಹಿನ್ನೆಲೆ ಏನು?
Related Articles
Advertisement
ಮೆರವಣಿಗೆಯ ಇತಿಹಾಸ
ಆರಂಭದಲ್ಲಿ ಪೇಟೆ ಶ್ರೀ ರಾಮ ಮಂದಿರ ಮತ್ತು ಗಣಪತಿ ಪ್ರತಿಷ್ಠಾನ ಸಮಿತಿಗಳು ತಾವೇ ಮುಂದಾಗಿ ದೇವರ ಭಾವ ಚಿತ್ರಗಳನ್ನು ಹಿಡಿದು ನಗರದಲ್ಲಿ ಮೆರವಣಿಗೆ ನಡೆಸುತ್ತಿದ್ದರು.
1958ರಲ್ಲಿ ದೂರದ ರಾಜಸ್ಥಾನದಿಂದ ಬಂದು ಮಡಿಕೇರಿಯಲ್ಲಿ ನೆಲೆನಿಂತ ದೈವಭಕ್ತ ಶ್ರೀ ಭೀಮ್ಸಿಂಗ್ ದೇಚೂರಿನ ರಘುರಾಮ ಮಂಟಪವನ್ನು ಆರಂಭಿಸಿದರು. ಈ ಮಂಟಪ ಪೇಟೆ ಶ್ರೀ ರಾಮಮಂದಿರ ಮಂಟಪದ ನಂತರ ಸಾಗುತ್ತಿತ್ತು. ದಸರಾ ಆಚರಣಾ ಕ್ರಮಕ್ಕೆ ಒಂದು ಉತ್ತಮ ಧಾರ್ಮಿಕ ಶಿಸ್ತನ್ನು ರೂಪಿಸಿದ ಪ್ರಪ್ರಥಮ ಕೀರ್ತಿ ಕಾಲೇಜು ರಸ್ತೆಯ ಶ್ರೀ ರಾಮ ಮಂದಿರಕ್ಕೆ ಸಲ್ಲುತ್ತದೆ.
ದಸರಾ ಉತ್ಸವ ಈಗ ಒಂದು ಧಾರ್ಮಿಕ ಶಿಸ್ತನ್ನು ಅನುಸರಿಸಿ ನಡೆಯುತ್ತಿದೆ. ವಿಜಯದಶಮಿಯಂದು ಪೇಟೆ ಶ್ರೀ ರಾಮ ಮಂದಿರದ ಮಂಟಪ ಮಂಗಳವಾದ್ಯಗಳೊಂದಿಗೆ ತನ್ನಲ್ಲಿಗೆ ಕಲಶದೊಂದಿಗೆ ಬಾರದ ಹೊರತು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡುವಂತಿಲ್ಲ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ದಶಮಂಟಪಗಳಲ್ಲಿ ಯಾವ ಮಂಟಪವೂ ಹೊರಡುವಂತಿಲ್ಲ ಮತ್ತು ಇತರ ಕರಗಗಳು ಮೆರವಣಿಗೆ ಬರುವಂತಿಲ್ಲ. ಮೂರು ಕರಗಗಳು ಮತ್ತು ದಶಮಂಟಪಗಳು ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಪೂಜೆಯನ್ನು ಸ್ವೀಕರಿಸಿದ ಅನಂತರವೇ ಬನ್ನಿ ಕುಡಿಯಲು ಹೊರಡಬೇಕೆಂಬ ನಿಯಮವಿದೆ.
ವಿಜಯದಶಮಿಯಂದು ಶ್ರೀ ಪೇಟೆ ರಾಮಮಂದಿರದ ಕಲಶ ಹೊತ್ತ ಪಲ್ಲಕಿ ಮೆರವಣಿಗೆಯಲ್ಲಿ ಹೊರಟು ಶ್ರೀ ಚೌಟಿ ಮಾರಿಯಮ್ಮ ದೇವಾಲಯವನ್ನು ತಲುಪಿ ಅಲ್ಲಿ ಕರಗ ಪೂಜೆ ಸ್ವೀಕರಿಸಿ, ಅನಂತರ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಪೂಜೆ ಸ್ವೀಕರಿಸುತ್ತದೆ. ಶ್ರೀ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಬಂದಾಗ ಅದೇ ಸಮಯದಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗ ಹೊರಟು ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಪೇಟೆ ರಾಮಮಂದಿರದ ಕಲಶ ಪೂಜೆಗೆ ಅಣಿಯಾಗುತ್ತದೆ. ಒಟ್ಟಿನಲ್ಲಿ ಜನೋತ್ಸವವಾಗಿ ವಿಜೃಂಭಿಸುತ್ತಿರುವ ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಪಾತ್ರವೇ ಇಲ್ಲಿ ಪ್ರಮುಖ.
ಕರಗ ಸಂಚಾರ ಆರಂಭ
ಮಹಾಲಯ ಅಮಾವಾಸ್ಯೆಯ ಅನಂತರದ ದಿನಗಳಲ್ಲಿ ನಾಲ್ಕೂ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಕರಗ ಕಟ್ಟಲು ಪಂಪಿನ ಕೆರೆಗೆ ತೆರಳಲಾಗುತ್ತದೆ. ಅಲ್ಲಿ ಹೂವಿನ ಅಲಂಕಾರವಾದ ಅನಂತರ ಶಾಸ್ತ್ರೋಕ್ತವಾಗಿ ಪೂಜೆ ಪುರಸ್ಕಾರ ಮುಗಿಸಿ ನಾಲ್ಕು ಕರಗಗಳು ನಗರ ಸಂಚಾರ ಆರಂಭಿಸುತ್ತವೆ. ಮಹದೇವಪೇಟೆ ರಸ್ತೆಯಲ್ಲಿ ಮನೆ ಮನೆಗಳಲ್ಲಿ ಪೂಜೆ ಸ್ವೀಕರಿಸುವ ಕರಗಗಳು ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಾಲಯ ಹಾಗೂ ಪೇಟೆ ಶ್ರೀ ರಾಮಮಂದಿರ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತವೆ.
ಪೂಜಾ ವಿಧಿವಿಧಾನ ಹಿನ್ನೆಲೆ
ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ಎಲ್ಲ ರೀತಿಯ ಮೇಲ್ವಿಚಾರಣೆಯನ್ನು ಮಡಿಕೇರಿ ನಗರ ನಿವಾಸಿ ಮಧುರೈಯ್ಯರವರು ಸುಮಾರು 25 ವರ್ಷಗಳಿಂದ ಮಾಡಿಕೊಂಡು ಬಂದವರು. 1996-97ರ ತನಕ ಅವರ ತಂದೆ ಪೂಜಾರಿ ಚಾಮಿಯವರು ಈ ಮಹತ್ತರ ಜವಬ್ದಾರಿಯನ್ನು ಮಾಡಿಕೊಂಡು ಬಂದಿದ್ದರು. ಅವರಿಗಿಂತ ಮೊದಲು ಅವರ ತಂದೆ, ಅವರ ಅಣ್ಣ ಹೀಗೆ ತಮಿಳುನಾಡಿನಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ ತೆಲುಗು ಮಾತಾಡುವ ಗೌಳಿ ವಂಶಸ್ಥರಾದ ಇವರ ಕುಟುಂಬಸ್ಥರೇ ನಾಲ್ಕು ಶಕ್ತಿ ದೇವತೆಗಳ ಕರಗವನ್ನು ಕಠಿಣ ವೃತದೊಂದಿಗೆ ಹೊರುವುದು ಹಾಗೂ ಅದರ ಸಕಲ ಮೇಲ್ವಿಚಾರಣೆಯ ಹೊಣೆಯನ್ನು ಹೊತ್ತುಕೊಂಡು ಬಂದಿರುವುದು ವಾಡಿಕೆ.
ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಕರಗ ಪೂಜೆ
ಈ ಕರಗ ಉತ್ಸವದ ಸ್ಥಾಪನೆ 1791ನೇ ಇಸವಿಯಲ್ಲಿ ದೊಡ್ಡವೀರರಾಜೇಂದ್ರ ಆ ಸಂದರ್ಭದಲ್ಲಿ ರಾಜ್ಯಕ್ಕೆ ಮಾರಿಯಾಗಿ ಕಾಡಿದ ಕೆಲವೊಂದು ಸಾಂಕ್ರಾಮಿಕ ರೋಗಗಳನ್ನು ರಾಜ್ಯದಿಂದ ನಿರ್ಮೂಲನೆ ಮಾಡುವ ಸಲುವಾಗಿ ನಗರದ ದೊಡ್ಡ ಬೀದಿಗಳಲ್ಲಿ 9 ದಿನಗಳ ಕಾಲ ಚೋಳರ ಕಾಲದಲ್ಲಿ ತಮಿಳುನಾಡಿನಿಂದ ಬಂದು ಇಲ್ಲಿ ನೆಲೆಸಿದ ತೆಲುಗು ಮಾತಾಡುವ ಗೌಳಿ ವಂಶಸ್ಥರಿಗೆ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು ಹೊತ್ತು ಮನೆಮನೆಗೆ ತೆರಳಿ ಈ ಮೂಲಕ ನಗರದ ಮನೆಗಳಿಗೆ ಮಾರಿಯಾಗಿ ಕಾಡುತ್ತಿದ್ದ ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವಂತೆ ಶಕ್ತಿ ದೇವತೆಗಳನ್ನು ವರ್ಷಕ್ಕೆ ಒಮ್ಮೆ ತಲೆಯ ಮೇಲೆ ಹೊತ್ತು ನಗರ ಪ್ರದಕ್ಷಿಣೆ ಹಾಕುವಂತಹ ದೈವತಾ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ನೀಡಿದರು ಎನ್ನುವುದು ಇತಿಹಾಸ.
ಕರಗಕ್ಕೆ ಗೌಳಿ ವಂಶಸ್ಥರ ಕೊಡುಗೆ
ಹೀಗೆ ಗೌಳಿ ವಂಶಸ್ಥರ ಯಾದವ ಕುಲದ ಹಿರಿಯರು ಅಂದಿನಿಂದ ಇಂದಿನವರೆಗೆ ಕರಗ ಉತ್ಸವವನ್ನು ಆಚರಿಸುತ್ತಾ ಬಂದಿದ್ದು ಕಳೆದ 25 ವರ್ಷಗಳಿಂದ ಅವರ ವಂಶದ ಹಿರಿಯರಾದ ಮಧುರೈಯ್ಯರವರು ಇದೀಗ ಕರಗ ಉತ್ಸವದ ಸಕಲ ಮೇಲ್ವಚಾರಣೆಯ ಜವಬ್ದಾರಿಯನ್ನು ನಿಭಾಯಿಸುತ್ತಾ ಬಂದಿದ್ದು ಈ ವರ್ಷವು ಅವರ ಮುಂದಾಳತ್ವದÇÉೇ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ನಗರ ಪ್ರದಕ್ಷಿಣೆ ಹಾಕಲಿದೆ ಎನ್ನುವುದು ವಿಶೇಷ.
ಏನೇ ಇರಲಿ ಇರಲಿ ಶಕ್ತಿದೇವತೆಗಳು ನಾಡಿಗೆ ಬಂದಿರುವ ಕಳಂಕವನ್ನು ತೊಡೆದು ನಂಬಿ ಬಂದ ಜನರ ಕೈಹಿಡಿದು ಮುನ್ನಡೆಸಲಿ. ಎಲ್ಲರ ಆಶಯಗಳನ್ನು ಈಡೇರಿಸಲಿ. ದಸರಾ ಕೇವಲ ಜನೋತ್ಸವವಾಗದೆ ಜನರ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ದಾರಿಯಾಗಲಿ.
- ಚಂದನ್ ನಂದರಬೆಟ್ಟು
ಮಡಿಕೇರಿ