ಮಡಿಕೇರಿ: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ಫೆ.6ರ ವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.
ಅಲ್ಲಿನ ಪುಷ್ಪಗಳಿಂದ ನಿರ್ಮಾಣವಾಗಿರುವ ಕಲಾಕೃತಿಗಳು ಗಮನಸೆಳೆಯುತ್ತಿವೆ. ನಾಲ್ಕುನಾಡು ಅರಮನೆಕಲಾಕೃತಿಯ ಚಿತ್ರದಲ್ಲಿ ರಾಜರುಕುಳಿತಿರುವುದು, ಹಾಗೆಯೇ ಕೊಡವ ಉಡುಪಿನಲ್ಲಿ ಸ್ವಾಗತಿಸುವ ಚಿತ್ರಗಳು ಜನಮನ ಸೆಳೆಯುತ್ತಿವೆ. ಪ್ರಧಾನಿನರೇಂದ್ರ ಮೋದಿ, ವೀರಸೇನಾನಿಜನರಲ್ ಕೆ.ಎಸ್.ತಿಮ್ಮಯ್ಯ, ಪುನಿತ್‌ರಾಜ್‌ಕುಮಾರ್ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ ಹಣ್ಣುಗಳಲ್ಲಿ ಕೆತ್ತನೆ ಮಾಡಲಾಗಿದೆ.ಫಲಪುಷ್ಪ ಪ್ರದರ್ಶನವು ಕಣ್ಮನಸೆಳೆಯುತ್ತಿದ್ದು, ಪ್ರವಾಸಿಗರಲ್ಲಿ ಸಂತಸ ತರಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಫಲಪುಷ್ಪ ಪ್ರದರ್ಶನಕ್ಕೆ ಭಾರಿ ಜನಮನ್ನಣೆ ವ್ಯಕ್ತವಾಗುತ್ತಿದ್ದು ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನ ಜನರ ಮನಸೋರೆಗೊಳಿಸಲಿದೆ.