Advertisement

ಮಡಿಕೇರಿ : ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿ : ಕಾರ್ಮಿಕ ಸ್ಥಳದಲ್ಲೇ ಸಾವು

06:05 PM May 26, 2022 | Team Udayavani |

ಮಡಿಕೇರಿ : ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿಯಡಿಗೆ ಸಿಲುಕಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿಯ ಕೂಟುಹೊಳೆ ಬಳಿ ಗುರುವಾರ ನಡೆದಿದೆ.

Advertisement

ಹಾಸನ ಮೂಲದ ಕಾರ್ಮಿಕ ಸಂತೋಷ್(22) ಮೃತ ದುರ್ದೈವಿಯಾಗಿದ್ದಾರೆ.

ಜೆಸಿಬಿಯ ಬ್ರೇಕ್ ವಿಫಲಗೊಂಡು ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈ ಸಂದರ್ಭ ಕಾರ್ಮಿಕ ಸಂತೋಷ್ ಜೆಸಿಬಿಯಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಒಂದು ಕಾಲು ದೇಹದಿಂದ ಬೇರ್ಪಟ್ಟಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಮೇ 27ರಿಂದ ಮಾವು, ಹಲಸು ಮೇಳ; 50ಕ್ಕೂ ಹೆಚ್ಚು ವಿವಿಧ ತಳಿಯ ಮಾವು ಪ್ರದರ್ಶನ

Advertisement
Advertisement

Udayavani is now on Telegram. Click here to join our channel and stay updated with the latest news.

Next